Breaking
Tue. Dec 24th, 2024

ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್  ನಿಧನ…!

ಕನ್ನಡದ ಕುಳ್ಳ, ಹಿರಿಯ ನಟ ದ್ವಾರಕೀಶ್  ನಿಧನರಾಗಿದ್ದಾರೆ. 81ರ ವಯಸ್ಸಿನ ನಟ, ವಯೋಸಹಜ  ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರು. ಇಂದು ಬೆಳಗ್ಗೆ ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಅವರ ಪುತ್ರ ಯೋಗೀಶ್ ಅವರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

81 ವರ್ಷದ ದ್ವಾರಕೀಶ್ 19 ಅಗಷ್ಟ್ 1942ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾರೆ. ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದ ದ್ವಾರಕೀಶ್ ತಮ್ಮ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಅವರ ಮೂಲಕ 1964ರಲ್ಲಿ ‘ವೀರ ಸಂಕಲ್ಪ’ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿರ್ಮಾಪಕರಾಗಿ ಡಾ.ರಾಜ್ ಅವರೊಂದಿಗೆ ‘ಮೇಯರ್ ಮುತ್ತಣ್ಣ’ ಭಾಗ್ಯವಂತರು ನಿರ್ಮಿಸಿದರು. ನಂತರ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಬಹಳ ಪ್ರಸಿದ್ಧಿ ಪಡೆಯಿತು. ಕಳ್ಳ-ಕುಳ್ಳ ಎಂದೇ ಪ್ರಸಿದ್ದವಾಗಿದ್ದ ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು. 2006 ರಲ್ಲಿ ಆಪ್ತಮಿತ್ರ ನಿರ್ಮಾಣ ಮಾಡಿದ ದ್ವಾರಕೀಶ್ ಅತ್ಯಂತ ಯಶಸ್ಸು ಕಂಡಿದ್ದರು.

ನಂತರ ಹಲವಾರು ಚಿತ್ರ ನಿರ್ಮಾಣ ಮಾಡಿದರು ಅಂತಹ ಯಶಸ್ಸು ಕಾಣದೆ ಕಂಗಾಲಾಗಿದ್ದರು. ಚಿತ್ರಜೀವನದಲ್ಲಿ ಹಲವಾರು ಏಳುಬಿಳು ಕಂಡ ದ್ವಾರಕೀಶ್ ಕರ್ನಾಟಕದ ಕುಳ್ಳ ಎಂಬ ಖ್ಯಾತಿಯ ಜೊತೆಗೆ ವಿದೇಶದಲ್ಲಿ ಚಿತ್ರೀಕರಣ ಲಂಡನ್ ನಲ್ಲಿ ಹಾಡುಗಳ ಧ್ವನಿಮುದ್ರಣ , ಕಿಶೋರ್ ಕುಮಾರ್ ಅವರಂತಹ ಗಾಯಕರನ್ನು ಪರಿಚಯಿಸಿದ್ದು. ನಟ. ನಟಿಯರನ್ನ, ಸಂಗೀತಗಾರನ್ನ, ಗಾಯಕರನ್ನು, ತಂತ್ರಜ್ಞರನ್ನು ಪರಿಚಯಿಸಿದ ಸಾಹಸಿ ಇದೇ ದ್ವಾರಕೀಶ್. 

 

 

Related Post

Leave a Reply

Your email address will not be published. Required fields are marked *