Breaking
Wed. Dec 25th, 2024

ಗ್ರಾಮಗಳಿಗೆ ‌ರಸ್ತೆ ಮಾರ್ಗ ಆಗುವರೆಗೂ ಚುನಾವಣಾ ಬಹಿಷ್ಕಾರ…!

ತೀರ್ಥಹಳ್ಳಿ : ಆಗುಂಬೆ ಹೋಬಳಿಯ ಬಾಳೆಹಳ್ಳಿ ಗ್ರಾಮ, ಉಳುಮಡಿ, ಸುರುಳಿಗದ್ದೆ, ಕಣಗುಲ್ ಈ ಗ್ರಾಮಗಳಿಗೆ ‌ರಸ್ತೆ ಮಾರ್ಗ ಆಗುವರೆಗೂ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಡಿಸಿಗೆ ದೂರು ನೀಡಿದ್ದಾರೆ.

ಸುಮಾರು 40 ರಿಂದ 45 ಕುಟುಂಬಗಳು ವಾಸವಾಗಿರುವ ಈ ಗ್ರಾಮ ಗಳಲ್ಲಿ ವಾಸದ ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ ರಸ್ತೆ ಸರಿ ಇಲ್ಲದ ಕಾರಣ 20 ರಿಂದ 30 ಜನ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಕೂಡ ತೊಂದರೆಯಾಗುತ್ತಿದೆ ಇದೇ ರಸ್ತೆ ಸಮಸ್ಯೆಯಿಂದ ಇಲ್ಲಿನ ಯುವಕರಿಗೆ ಹೆಣ್ಣು ಕೂಡ ಸಿಗುತ್ತಿಲ್ಲ ಎನ್ನುವುದು ನೊಂದ ಯುವಕರ ದೂರು.

ಹಾಗೆ ಗ್ರಾಮಕ್ಕೆ ಕರೆಂಟಿನ ವ್ಯವಸ್ಥೆ ಇದ್ದರೂ ಕೂಡ ಸರಿಯಾದ ಟಿಸಿ ಇರದೆ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಗ್ರಾಮದ ಹಳ್ಳಗಳಿಗೆ ಹೋಗಲು ಇರುವ ಕಲ್ಲು ಸಂಕಗಳಿಗೆ ಸರಿಯಾದ ಮಾರ್ಗಗಳು ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ ಕೂಡಲೇ ಇವೆಲ್ಲವನ್ನೂ ಸರಿಪಡಿಸಬೇಕು ಇಲ್ಲವಾದರೆ ನಾವು ಯಾವುದೇ ರೀತಿಯಿಂದಲೂ ಮತಗಳನ್ನು ಚಲಾಯಿಸುವುದಿಲ್ಲ ಈ ಇಡೀ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ದೂರು ನೀಡಿದ್ದಾರೆ.

Related Post

Leave a Reply

Your email address will not be published. Required fields are marked *