ಸಾಗರ ; ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿಯ ಹೊಸೂರು ಶ್ರೀಕಾಲಭೈರವೇಶ್ವರ ದೇವಸ್ಥಾನ ಸೇವಾ ಸಮಿತಿ,ಕೋಣನತಲೆ, ಸಾಗರ ಇದರ ಒಂಬತ್ತನೇ ವರುಷದ ವರ್ಧಂತಿ ಮಹೋತ್ಸವವು ನಿನ್ನೆ ದಿನಾಂಕ 16-04-2024, ಮಂಗಳವಾರದಂದು ಶ್ರೀಸುಖದೈವನಾಥ ಗುರೂಜಿ, ಚಂದ್ರಗುತ್ತಿ ಮಠ, ಇವರ ಶುಭಾರಂಭದೊಂದಿಗೆ ಅತೀ ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಬೆಳಿಗ್ಗೆ ಶ್ರೀಕಾಲಭೈರವನಿಗೆ ಪಂಚಾಮೃತ ಅಭಿಷೇಕ, ಕಲಾಹೋಮ, ಅಲಂಕಾರ ಪೂಜೆ, ರೂಟ್ ನೈವೇದ್ಯ, ಪೂರ್ಣ ಕುಂಭಾಭಿಷೇಕ, ನಂತರ ಕಾಲಬೈರವನ ದರುಶನ, ಈ ಧಾರ್ಮಿಕ ಕಾರ್ಯಕ್ರಮ ಮಧುಸೂಧನ್ ಜೋಯಿಸ್ ಬಳ್ಳಿಬೈಲು, ನಂತರ ಶ್ರೀಶ್ರೀ ನಿವೃತ್ತಿನಾಥ ಸ್ವಾಮೀಜಿ ಮತ್ತು ಕಾಲಭೈರವ ದರುಶನ ಪಾತ್ರಧಾರಿಗಳಾದ ವಸಂತ ಬೈಗುಳ, ಇವರ ತೆಂಕಬೆಟ್ಟು. ಈ ವರ್ಧಂತಿ ಮಹೋತ್ಸವದ ವಿಶೇಷವಾಗಿ ಶ್ರಮಿಕ ಮೂವರು ಖಾಸಗಿ ಬಸ್ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ಸಾಗರದಿಂದ ಹೊರನಾಡಿಗೆ ಹೋಗಿ ಬರುವ ಭಾಗ್ಯಲಕ್ಷ್ಮೀ ಬಸ್’ನಲ್ಲಿ ಚಾಲಕರಾಗಿ ಕಳೆದ 30ವರುಷಗಳಿಂದ ಸೇವೆಸಲ್ಲಿಸಿದ “ಜಯರಾಜ್ ಸಿ.” ಹೆದ್ದಾರಿಪುರ ಮತ್ತು ಸಾಗರದಿಂದ ಧರ್ಮಸ್ಥಳಕ್ಕೆ ಸಂಚರಿಸುವ ಶಾಂತಿಸಾಗರ ಈ ಬಸ್ಸಿನಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ “ಫಯಾಜ್ ಹೆಚ್.ಜಿ. ಹುಂಚದಕಟ್ಟೆ ಮತ್ತು ಸಾಗರದಿಂದ ಉಡುಪಿಗೆ ಪ್ರತಿ ದಿನ ಹೋಗಿ ಕೃಷ್ಣಸ್ವಾಮಿ ಬಸ್’ನಲ್ಲಿ 30 ವರುಷ ಚಾಲಕರಾಗಿ ಸೇವೆ ಸಲ್ಲಿಸಿದ “ಅಬ್ದುಲ್ ಆರ್.ಎಂ.” ರಿಪ್ಪನ್‌ಪೇಟೆ ಈ ಮೂವರ ಚಾಲನಾ ಸೇವೆಯ ಅಭಿಮಾನಿಯಾಗಿ ಇವರಿಗೆ ಮತ್ತು ಶಿವಕುಮಾರ್ ಜಿ. ಜೋಗಿ ಲ, ಹೊಸೂರು ಇವರಿಂದ ಸನ್ಮಾನಿಸಲಾಯಿತು.
ಅದೇ ದಿನ ಸಾಯಂಕಾಲ ದೇವಸ್ಥಾನದ ಆವರಣದ ವೇದಿಕೆಯಲ್ಲಿ ಶಿವರುದ್ರಪ್ಪ. ಜೋಗಿ, ಗೆಂಡ್ಲ-ಹೊಸೂರು ಇವರಿಂದ ಗೀಗೀಪದ, ತತ್ವಪದ, ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ನಂತರ ಸಾಗರದ ಕುಗ್ವೆ ಜಾನಪದ ಕಲಾ ತಂಡದಿಂದ ಎರಡು ಗಂಟೆಗಳ ಕಾಲ ಜಾನಪದ ಗಾಯನ ಕಾರ್ಯಕ್ರಮ.
ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶ್ರೀಕಾಲಭೈರವ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಗುಡ್ಡಪ್ಪಹೋಗಿ ಇವರು ವಹಿಸಿದ್ದರು. ಸುರೇಶ್ ಜೋಗಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ನಾಗೇಂದ್ರ ಜೋಗಿ, ಕೊಡಚಾದ್ರಿ, ಹೊಳಲಿಂಗಪ್ಪ ಜೋಗಿ ಚವ್ಹಾಣ್, ತಿಳುವಳ್ಳಿ, ವೆಂಕಟೇಶ್, ಮಂಜುನಾಥ, ಕಾರ್ತೀಕ, ಸುನೀಲ, ಕುಶಾಲ್, ರಾಮು ಚವ್ಹಾಣ್, ಸುನೀಲ, ಕಿರಣ, ಗಿರೀಶ್, ರಾಘು, ಗಿರಿಜಾಮಾಲತೇಶ್, ಪವನ್, ಕೊಟ್ರೇಶ್ ಅರ್ಚಕರು, ಗಣೇಶ್, ದೇವಸ್ಥಾನದ ಕಾರ್ಯದರ್ಶಿ, ಚಿಗುರು ಸೇವಕರಾಗಿ ಭಾಗವಹಿಸಿದ್ದರು.