ಚಿತ್ರದುರ್ಗ, ಏಪ್ರಿಲ್. 17 : ನೀರಿನಲ್ಲಿ ಮುಳುಗಿ ತಾಯಿ ಮಗಳು ಮೃತಪಟ್ಟಿರುವ ದಾರುಣ ಘಟನೆ ಮಂಗಳವಾರ ರಾತ್ರಿ ನಡೆದಿದೆ. ನಗರದ ತುರುವನೂರು ರಸ್ತೆಯ ಶ್ರೀ ತಿಪ್ಪೇರುದ್ರಸ್ವಾಮಿ ಮಠದಲ್ಲಿರುವ ನೀರಿನ ತೊಟ್ಟಿಯಲ್ಲಿ ಬಿದ್ದು ಗೀತಾ(40) ಹಾಗೂ ಪುತ್ರಿ ಪ್ರಿಯಾಂಕಾ(22) ಸಾವನ್ನಪ್ಪಿದ್ದಾರೆ.
ಸುರೇಶ್, ಪತ್ನಿ ಗೀತಾ ಪುತ್ರಿ ಪ್ರಿಯಾಂಕಾ ಹಾಗೂ ಪುತ್ರ ಸೇರಿದಂತೆ ನಾಲ್ವರೂ ಮಠದಲ್ಲಿಯೇ ಕೆಲವು ವರ್ಷಗಳಿಂದ ವಾಸವಿದ್ದರು. ಮಂಗಳವಾರ ರಾತ್ರಿ ಸುರೇಶ್ ಹಾಗೂ ಪುತ್ರ ಹೊರಗಡೆ ಹೋಗಿದ್ದಾಗ ಮಠದಲ್ಲಿದ್ದ ಸುರೇಶ್ ಅವರ ಪತ್ನಿ ಮತ್ತು ಪುತ್ರಿ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.