Breaking
Tue. Dec 24th, 2024

ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಸುಜಾತ.ಡಿ ಅವರು ವೋಟು ಕೊಡಿ ನೋಟು ಕೊಡಿ ಎಂದು ಜನರ ಬಳಿ ಮತಯಾಚನೆ…!

ಚಿತ್ರದುರ್ಗ, ಏಪ್ರಿಲ್. 16 : ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿರುವ ಪಕ್ಷ ಎಸ್‌ಎಸ್‌ಎಸ್‌ಯು ಸಂಸ್ಥೆ (ಕಮ್ಯುನಿಸ್ಟ್) ಅಭ್ಯರ್ಥಿ ಸುಜಾತ.ಡಿ ಅವರು ಇಂದು ವೋಟು ಕೊಡಿ ನೋಟು ಕೊಡಿ ಎಂದು ಜನರ ಬಳಿ ಮತ ಕೇಳಲು ತಮ್ಮ ಹೋರಾಟಕ್ಕೆ ನಿಧಿ ಸಂಗ್ರಹಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಮುಖಂಡರಾದ ಕಾಮ್ರೇಡ್ ಎಂ. ಎನ್. ಮಂಜುಳಾ ಅವರು “ನಮ್ಮ ಪಕ್ಷದ ಎಲ್ಲಾ ಚಟುವಟಿಕೆಗಳು ಮತ್ತು ಹೋರಾಟಗಳು ಜನರ ಬೆಂಬಲ ಮತ್ತು ಸಹಕಾರದಿಂದಲೇ ನಡೆಯುತ್ತಿವೆ. ನಮ್ಮ ಪಕ್ಷವು ಚುನಾವಣೆಯನ್ನು ಸಹ ಒಂದು ಹೋರಾಟದ ಭಾಗವೆಂದು ಪರಿಗಣಿಸಲಾಗಿದೆ. ಒಂದು ವೈಚಾರಿಕ ಸಂಘರ್ಷದ ವೇದಿಕೆಯಲ್ಲಿ ಚುನಾವಣೆ ಎದುರಿಸುತ್ತದೆ. ಆದ್ದರಿಂದ ನಮ್ಮ ಈ ಹೋರಾಟಕ್ಕೆ ಜನರ ಬೆಂಬಲ ಖಂಡಿತ ಬೇಕು” ಎಂದು ಹೇಳಿದರು. 

ಅನಂತರ ಮಾತನಾಡಿದ ಪಕ್ಷದ ಅಭ್ಯರ್ಥಿ ಸುಜಾತ.ಡಿ ಅವರು “ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಾ ಮತ ಪ್ರಚಾರವನ್ನು ಇಂದಿನ ದಿನಗಳಲ್ಲಿ, ಚುನಾವಣಾ ಹೋರಾಟಕ್ಕೆ ಜನರಿಂದ ನಿಧಿ ಸಂಗ್ರಹಿಸಿ ನಮ್ಮ ಹೋರಾಟವನ್ನು ನಡೆಸಲಾಯಿತು. ನಾವು ಯಾವುದೇ ಉದ್ಯಮಿಗಳಿಂದ ದೇಣಿಗೆ ಸ್ವೀಕರಿಸುವುದಿಲ್ಲ. ಬದಲಾಗಿ ನಮ್ಮ ಹೋರಾಟದ ನಿಧಿಗೆ ಜನಸಾಮಾನ್ಯರಿಂದಲೇ ನಿಧಿ ಸಂಗ್ರಹಿಸಲಾಗುತ್ತಿದೆ, ಜನರ ನೈಜ ಸಮಸ್ಯೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ” ಎಂದು ಹೇಳಿದರು. 

ಹೋರಾಟದ ನಿಧಿ ಸಂಗ್ರಹಕ್ಕೆಂದು ಬಾಕ್ಸ್ ಹಿಡಿದು ಅಭ್ಯರ್ಥಿಯು ಸಂತೆ ಹೊಂಡದ ಸುತ್ತಮುತ್ತಲಿನ ವ್ಯಾಪಾರಿಗಳು ಮತ್ತು ಜನಸಾಮಾನ್ಯರಲ್ಲಿ ನಿಧಿ ಸಂಗ್ರಹಣೆ ಮಾಡಿದರು ಹಾಗೂ ಮತ ಪ್ರಚಾರ ಮಾಡಿದರು. ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಅಲ್ಲಿಂದ ಮುಂದೆ ವಾಸವಿ ಮಹಲ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದ ಮೂಲಕ ಹಾದು ಮಹಾತ್ಮ ಗಾಂಧಿ ವೃತ್ತದವರೆಗೆ ಪಾದಯಾತ್ರೆಯ ಮೂಲಕ ಮತ ಪ್ರಚಾರ ಮತ್ತು ನಿಧಿ ಸಂಗ್ರಹಣೆಯ ಕಾರ್ಯವನ್ನು ಮುಂದುವರೆಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಜೊತೆಯಲ್ಲಿದ್ದರು

Related Post

Leave a Reply

Your email address will not be published. Required fields are marked *