ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಈ ವರ್ಷ ಮೊದಲ ರಾಮನವಮಿ ಕಾರ್ಯಕ್ರಮಗಳು ಜರುಗಲಿವೆ. ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಉಸ್ತುವಾರಿವಹಿಸಿಕೊಂಡಿರುವ ಗೋಪಾಲ್ ಜಿ ಮಾಹಿತಿ ನೀಡಿದ್ದಾರೆ.
ಶ್ರೀರಾಮನ ಹೊಸ ಮಂದಿರದಲ್ಲಿ ಮೊದಲ ರಾಮ ನವಮಿ ಉತ್ಸವ ನಡೆಯುತ್ತಿದೆ, ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅನೇಕ ವ್ಯವಸ್ಥೆ ಮಾಡಲಾಗಿದೆ. ಬರುವಂತಹ ಭಕ್ತಾದಿಗಳಿಗೆ ಸರಿಯಾದ ವ್ಯಸವ್ಥೆ, ಬಿಸಿಲ ಝಳ ತಾಕಬಾರದೆಂದು ಜರ್ಮನ್ ಹ್ಯಾಂಗರ್ ವ್ತವಸ್ಥೆ, ನೆರಳಿನ ವ್ಯವಸ್ಥೆ, ನೀರು, ಶೌಚಾಲಯ, ಚಪ್ಪಲಿ ಹಾಗೂ ಇತರೆ ಸಾಮಾನುಗಳನ್ನು ಇರಿಸಲು ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಮನವಮಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಏಪ್ರಿಲ್ 17ರಂದು ರಾಮನವಮಿ ಕಾರ್ಯಕ್ರಮವು ಬೆಳಗಿನ ಜಾವ ರಾಮನನ್ನು ಎಬ್ಬಿಸುವ ಮಂಗಲ ಆರತಿಯಿಂದ ಶುರುವಾಗುತ್ತದೆ. ಬಳಿಕ ಬಾಲ ರಾಮನಿಗೆ ಪಂಚಾಮೃತ ಅಭಿಷೇಕ ಹಾಗೂ ಶೃಂಗಾರ ಸುಮಾರು ಒಂದೂಕಾಲು ಗಂಟೆಗಳ ಕಾಲ ನಡೆಯಲಿದೆ. 6 ಗಂಟೆಗೆ ಮೊದಲ ಶೃಂಗಾರ ಆರತಿ ನಡೆಯಲಿದ್ದು ದೂರದರ್ಶನದಲ್ಲಿ ನೇರಪ್ರಸಾರವನ್ನು ನೀವು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ. ನಿತ್ಯವೂ ರಾಮ ಮಂದಿರದಲ್ಲಿ ರಾಮಾಯಣ, ವಾಲ್ಮೀಕಿ ರಾಮಾಯಣದ ಪಾಠ, ರಾಮಚರಿತ ಪಾಠ ನಡೆಯುತ್ತಿದೆ.
ಪ್ರತಿನಿತ್ಯ ಸಂಜೆ ರಾಮನ ಗಾಯನ ಮಾಡುತ್ತಿದ್ದೇವೆ, 17ರಂದು ಮಧ್ಯಾಹ್ನ 12 ಗಂಟೆಗೆ ರಾಮನ ಪ್ರಕಟೋತ್ಸವ, ಅದಕ್ಕೂ ಮುನ್ನ ಬೆಳಗ್ಗೆ 11 ಗಂಟೆಗೆ ಮೊದಲಿದ್ದಂತ ಉತ್ಸವ ಮೂರ್ತಿ ರಾಮ, ಲಕ್ಷ್ಮಣ, ಭರತ ಶತ್ರುಘ್ನ ಅಭಿಶೇಷ ನಡೆಯಲಿದೆ.
12 ಗಂಟೆಗೆ ಸರಿಯಾಗಿ ಆರತಿ ಮೂಲಕ ಪ್ರಕಟೋತ್ಸವ ನಡೆಯಲಿದೆ, ರಾಮ ಸೂರ್ಯವಂಶಿಯಾದ್ದರಿಂದ ರಾಮನ ಹಣೆಯನ್ನು ಪ್ರಕಾಶಿಸುವ ಸೂರ್ಯ ತಿಲಕ ಪ್ರಯೋಗ ಯಶಸ್ವಿ ಈಗಾಗಲೇ ಯಶಸ್ವಿಯಾಗಿದ್ದು, ಮೂರು ನಿಮಿಷಗಳ ಸೂರ್ಯ ತಿಲಕದಿಂದ ರಾಮನ ಹಣೆಯನ್ನು ಪ್ರಕಾಶಿತಗೊಳಿಸುವುದನ್ನು ನೀವು ಕಣ್ತುಂಬಿಕೊಳ್ಳಬಹುದು. ಪ್ರತಿಯೊಬ್ಬ ಭಕ್ತರೂ ರಾಮನನ್ನು ಅಲ್ಲಿಗೆ ಬಂದಾದರೂ ಅಥವಾ ಮನೆಯಲ್ಲೇ ಇದ್ದುಕೊಂಡು ರಾಮನ ಆಶೀರ್ವಾದಕ್ಕೆ ಪ್ರಾಪ್ತರಾಗಿ ಎಂದು ಗೋಪಾಲ್ ಜಿ ಹೇಳಿದ್ದಾರೆ.