ಅಗಲಿದ ಹಿರಿಯ ಚೇತನ, ನಟ ದ್ವಾರಕೀಶ್ ಅವರ ಅಸ್ಥಿ ವಿಸರ್ಜನೆ ಕಾರ್ಯ ಇಂದು ಶ್ರೀರಂಗಪಟ್ಟಣದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಸ್ಥಿ ವಿಸರ್ಜನೆಗೂ ಮುನ್ನ ಬೆಂಗಳೂರಿನ ಟಿ.ಆರ್ ಮಿಲ್ ರುದ್ರಭೂಮಿಯಲ್ಲಿ ಪೂಜೆ ಸಲ್ಲಿಸಲಾಗಿದೆ.
ಪೂಜೆ ಸಲ್ಲಿಕೆ ಬಳಿಕ ಅಸ್ಥಿ ತೆಗೆದುಕೊಂಡು ಹೋಗಿರುವ ಕುಟುಂಬಸ್ಥರು ಇಂದು ಬೆಳಗ್ಗೆ 9 ಗಂಟೆ ಬಳಿಕ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ದ್ವಾರಕೀಶ್ ನಿಧನರಾಗಿದ್ದಾರೆ.
ಕರ್ನಾಟಕದ ಕುಳ್ಳ ಎಂದೇ ಖ್ಯಾತರಾಗಿದ್ದ ದ್ವಾರಕೀಶ್, ಅಪಾರ ಅಭಿಮಾನಿಗಳನ್ನು ಮತ್ತು ತುಂಬಿದ ಕುಟುಂಬವನ್ನು ಅಗಲಿದ್ದಾರೆ. ಅಗಲಿದ ಚೇತನಕ್ಕೆ ನಾಡಿನ ಅನೇಕರು ಕಂಬನಿ ಮಿಡಿದಿದ್ದಾರೆ.