ಭದ್ರಾವತಿ : ರೈಲ್ವೇ ಅಂಡರ್ ಪಾಸ್‌ನಲ್ಲಿ ಲಾರಿ ಅಪಘಾತ ಸಂಭವಿಸಿದ ಹಳಿಗಳು ಏರು ಪೇರಾಗಿ, ಎರಡು ರೈಲುಗಳಿಗೆ ಎರಡು ಗಂಟೆ ತಡವಾಗಿ ಸಂಚಾರ ಆರಂಭವಾಗಿದೆ.
ಭದ್ರಾವತಿ ಬಳಿ ಅಂಡರ್ ಪಾಸ್ ದೊಡ್ಡ ವಾಹನವೊಂದು ಹೋಗುವಾಗ ಹಳಿ ಸುರಕ್ಷತೆಗಾಗಿ ಹಾಕಿದ್ದ 4 ಮೀಟರ್ ಎತ್ತರದ ಬ್ಯಾರಿಕೇಡ್ ಹೊಡೆದ ಪರಿಣಾಮ ಬ್ಯಾರಿಕೇಡ್ ಮುರಿದು ಹೋಗುತ್ತಿತ್ತು. ಇದರಿಂದ ಹಳಿಗಳು ಏಳುಪೇರಾಗಿ ತಾಂತ್ರಿಕ ದೋಷ ಉಂಟಾಗಿತ್ತು. ಕೂಡಲೆ ಸಿಬ್ಬಂದಿ ಹಳಿ ರಿಪೇರಿ ಕಾಮಗಾರಿ ಆರಂಭಿಸಿದ್ದರು.
ಬೆಳಗ್ಗೆ 4.45ಕ್ಕೆ ಶಿವಮೊಗ್ಗ ತಲುಪಬೇಕಿದ್ದ ಮೈಸೂರು -ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 6.45ಕ್ಕೆ ತಲುಪಿದೆ. ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಡಬೇಕಿದ್ದ ಬೆಂಗಳೂರು ಜನಶತಾಬ್ದಿ ರೈಲು ಸುಮಾರು 6.35ಕ್ಕೆ ಹೊರಟಿದೆ. ವಿಳಂಬಕ್ಕೆ ಕಾರಣ ಗೊತ್ತಾಗದೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದರು.
ಇನ್ನು ಭರದಿಂದ ದುರಸ್ತಿ ಕಾರ್ಯ ನಡೆಯುತ್ತಿದೆ, ಅಂಡರ್ ಬ್ರಿಡ್ಜ್ ಸಮೀಪದಲ್ಲಿ ಟ್ರಾಫಿಕ್ ಜಾಮ್ ಆಗಿದೆ.