ಏಪ್ರಿಲ್.18: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಐದನೇ ದಿನವಾದ ಏಪ್ರಿಲ್ 18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದವರ ವಿವರ; ಕೆಆರ್‍ಎಸ್ ಪಕ್ಷದಿಂದ ರಘವೇಂದ್ರ ಜಿ.ಪಿ ಉಳಿದಂತೆ ಎಲ್ಲಾ ಪಕ್ಷೇತರರಾಗಿದ್ದು ರವಿನಾಯಕ, ತಸ್ಲಿಮ್ ಭಾನು, ಪರ್ವೇಜ್, ಎಂ.ರಂಗನಾಥಸ್ವಾಮಿ, ರಶೀದ್ ಖಾನ್, ಸಲೀಂ, ಮಂಜುನಾಥ ಎ.ಕೆ, ಅಲ್ಲಾ ಭಕ್ಷಿ.ಬಿ, ಅಬ್ದುಲ್ ನಜೀರ್ ಸಾಬ್ ನಾಮಪತ್ರ ಸಲ್ಲಿಸಿದವರು.
ಇದುವರೆಗೆ ಒಟ್ಟು 29 ಅಭ್ಯರ್ಥಿಗಳಿಂದ 34 ನಾಮಪತ್ರಗಳು ಸಲ್ಲಿಕೆಯಾಗಿದೆ. ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ.18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ.
ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದವರು: ಕಾಂಗ್ರೆಸ್‍ನಿಂದ ಡಾ; ಪ್ರಭಾ ಮಲ್ಲಿಕಾರ್ಜುನ್ ನಾಲ್ಕು ನಾಮಪತ್ರ, ಕೆಆರ್‍ಎಸ್ ಪಕ್ಷದ ರಾಘವೇಂದ್ರ ಜಿ.ಪಿ 2, ಪಕ್ಷೇತರರಾಗಿ ವಿನಯ್‍ಕುಮಾರ್ ಜಿ.ಬಿ. 2 ನಾಮಪತ್ರ ಸಲ್ಲಿಸಿದ್ದಾರೆ.