ಮೂರು ಹಿಂದೆ ವಿಷ್ಣುವರ್ಧನ್ ಅಭಿನಯದ ‘ಅಪ್ಪಾಜಿ’ ಸಿನಿಮಾ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ರಾಮನವಮಿ ಶುಭದಿನದಂದು ಸಿದ್ದಗಂಗಾ ಮಠದಲ್ಲಿರುವ ಶಿವಕುಮಾರ ಸ್ವಾಮಿಗಳ ಗದ್ದಿಗೆ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ. ಬಿಗ್ ಬಾಸ್ ವಿನ್ನರ್ ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಹಿರಿಯ ನಟ ಸ್ವಸ್ತಿಕ್ ಶಂಕರ್ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ‘ಪ್ರೀತಿಗೆ ಕಡಲು ಕೋಪಕ್ಕೆ ಸಿಡಿಲು’ ಎಂಬ ಅಡಿಬರಹವಿದೆ.
ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ಪ್ರತಾಪ್. ಹೆಚ್. ಶಿವಮೊಗ್ಗ ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ತುಮಕೂರಿನ ಬಿ.ಚಂದಿರಧರ,ಪಿನ್ನೇನಹಳ್ಳಿ-ಹೊನ್ನೇನಹಳ್ಳಿ, ತಂದೆಯ ಪಾತ್ರಕ್ಕೆ ಬಣ್ಣ ಹಚ್ಚುವ ಜೊತೆಗೆ ಸುಚಂದು ನೂಶಿತ ಕ್ರಿಯೇಶನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿರುವ ಹೊಸ ಅನುಭವ.
ನಿರ್ದೇಶಕರು ಹೇಳುವಂತೆ ಮೊದಲು ‘ಜನಕ’ ಹೆಸರನ್ನು ಇಡಲಾಗಿದೆ. ಬೇರೆಯವರು ನೊಂದಣಿ ಮಾಡಿದರು, ಅನಿವಾರ್ಯವಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆ. ನಾನು ಮತ್ತು ನಿರ್ಮಾಪಕರು ಸಾಹಸಸಿಂಹನ ಅಭಿಮಾನಿಗಳು. ಶೀರ್ಷಿಕೆ ಹಳೆಯದಾಗಿದ್ದರೂ ಕಥೆ ಹೊಸತನದಿಂದ ಇರಲಿದೆ. ಅಪ್ಪನಾದವನು ಮಕ್ಕಳ ಮೇಲೆ ತೋರಿಸುವ ಪ್ರೀತಿ, ಆತನ ಜವಬ್ದಾರಿ ಏನಿರುತ್ತದೆ. ಒಂದು ಹಂತದಲ್ಲಿ ತನಗಾದ ನೋವು, ಅನ್ಯಾಯಗಳನ್ನು ಹೇಗೆ ತೀರಿಸಿಕೊಳ್ಳುತ್ತದೆ ಎಂದು ಭಾವನಾತ್ಮಕವಾಗಿ ತೋರಿಸಲಾಗುತ್ತಿದೆ. ತುಮಕೂರು, ಡಾಬಸಪೇಟೆ ಉಳಿದಿದ್ದನ್ನು ಬೆಂಗಳೂರು ಚಿತ್ರೀಕರಣ ನಡೆಸಲಾಯಿತು.
ಸಹಾಯಕ ಕೋರಿಯೋಗ್ರಾಫರ್ ಆಗಿರುವ ಶ್ರೀವೆಂಕಿ ಆಟೋ ಚಾಲಕನಾಗಿ ನಾಯಕ. ಪೂಜಾರಾಮ್ ನಾಯಕಿ. ತಾಯಿಯಾಗಿ ಭವ್ಯ. ಇವರೊಂದಿಗೆ ನಾಗೇಂದ್ರಅರಸ್, ಮಹೇಶ್‌ಸಿದ್ದು, ಜಗದೀಶ್‌ಕೊಪ್ಪ, ಅಭಿಷೇಕ್, ಸುನಿಲ್, ಕರ್ಣ, ಯಶಸ್, ಪಲ್ಟಿಗೋವಿಂದ, ಸುರೇಶ್‌ಸ್ವಾಮಿ, ಸುಶೀಲ, ಶಿವಮೊಗ್ಗ ರಾಮಣ್ಣ, ಗೋಪಾಲ್.ಕೆ.ಆರ್, ಬೇಬಿ ಚೈತ್ರ, ಮಾಸ್ಟರ್ ದುಶ್ಯಂತಚಂದ್ರ, ಕೆಂಚಪ್ಪ, ಲಿಖಿತಾಲಿವ್ಯ ಮುಂತಾದವರು ನಟಿಸುತ್ತಿದ್ದಾರೆ. ಆರು ಹಾಡುಗಳಿಗೆ ಕುಶಾಲ್ರಾಜ್ ಸಂಗೀತವಿದೆ. ಈ ಮೇಲಿನ ಮಗ, ತಂದೆ ಮಗಳ ಮೇಲೆ ತಂದೆ ಗೀತೆ ಇರುವುದು ವಿಶೇಷ. ಜಿ.ವಿ.ರಮೇಶ್-ಕೇಶವ್ ಛಾಯಾಗ್ರಹಣ, ಸಾಹಸ ಕೌರವ ವೆಂಕಟೇಶ್, ಸಾಹಿತ್ಯ ತ್ರಿಲೋಕ’ತ್ರಿವಿಕ್ರಮ್, ಸಂಕಲನ ಮಹೇಶ್, ಕಾರ್ಯಕಾರಿ ನಿರ್ಮಾಪಕ ಜಗದೀಶ್‌ಗಂಗಪ್ಪ ಅವರಿದ್ದಾರೆ.