ಚಿತ್ರದುರ್ಗ ನಗರದಲ್ಲಿ ಅನ್ನ ಭಾಗ್ಯ ಅಕ್ಕಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆಟೋ ಸೀಜ್ ಮಾಡಿದ್ದು 6 ಕ್ಕೆಂಟಲ್ಗೋ ಹೆಚ್ಚಿನ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸರ್ಕಾರವು ಬಡವರಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಹಣದಾಸೆಯಿಂದ ಅಕ್ಕಿಯನ್ನು ಕೊಂಡುಕೊಂಡು ಅಧಿಕವಾಗಿ ಲಾಭ ಮಾಡುತ್ತಿದ್ದಾರೆ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ.
ಚಿತ್ರದುರ್ಗ ನಗರದ ಜೆ.ಸಿ.ಆರ್.ನಿಂದ ಹಿಮತ್ ನಗರಕ್ಕೆ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದು ಖಚಿತ ಮಾಹಿತಿಯ ಪಡೆದು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ನಗರದ ಆಹಾರ ನಿರೀಕ್ಷಕರು ತಿಪ್ಪೇಸ್ವಾಮಿ ದಾಳಿ ನಡೆಸಿ 6 ಕ್ಕೆಂಟಲ್ಗೋ ಹೆಚ್ಚಿನ ಅಕ್ಕಿಯನ್ನು ವಶಪಡಿಸಿಕೊಂಡಿದ್ದು ಮತ್ತು ಆಟೋವನ್ನು ಸೀಜ್ ಮಾಡಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ದಾಳಿಯ ವೇಳೆಯಲ್ಲಿ ಮುಜಫರ್ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣವು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.