ನೈರೋಬಿ: ಕೀನ್ಯಾದ ರಕ್ಷಣಾ ಮುಖ್ಯಸ್ಥರು ಮತ್ತು ಇತರ ಒಂಬತ್ತು ಉನ್ನತ ಅಧಿಕಾರಿಗಳು ಗುರುವಾರ ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ವಿಲಿಯಂ ರುಟೊ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 2:20 ರ ಸಮಯಕ್ಕೆ ನಮ್ಮ ರಾಷ್ಟ್ರವು ದುರಂತ ಹೆಲಿಕಾಪ್ಟರ್ ಅಪಘಾತವನ್ನು ಅನುಭವಿಸಿದೆ. ಕೀನ್ಯಾ ರಕ್ಷಣಾ ಪಡೆಗಳ (CDF) ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಅವರ ನಿಧನವನ್ನು ಘೋಷಿಸಲು ನಾನು ತೀವ್ರ ದುಃಖಿತನಾಗಿದ್ದೇನೆ ಎಂದು ರುಟೊ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಧಾನಿ ನೈರೋಬಿಯ ವಾಯುವ್ಯಕ್ಕೆ 400 ಕಿಲೋಮೀಟರ್ (250 ಮೈಲುಗಳು) ದೂರದಲ್ಲಿರುವ ಎಲ್ಜಿಯೊ ಮರಕ್ವೆಟ್ ಕೌಂಟಿಯಲ್ಲಿ ಹೆಲಿಕಾಪ್ಟರ್ ಪತನವಾಯಿತು. ಅವಘಡಕ್ಕೆ ಕಾರಣ ತಿಳಿಯಲು ಕೀನ್ಯಾ ವಾಯುಪಡೆಯು ತನಿಖಾ ತಂಡವನ್ನು ಕಳುಹಿಸಿದೆ ಎಂದು ರುಟೊ ಹೇಳಿದ್ದಾರೆ.
ಹೆಲಿಕಾಪ್ಟರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ರಾಜಧಾನಿ ನೈರೋಬಿಯ ವಾಯುವ್ಯಕ್ಕೆ ಸುಮಾರು 400 ಕಿಮೀ (250 ಮೈಲುಗಳು) ಎಲ್ಗೆಯೊ ಮರಕ್ವೆಟ್ ಕೌಂಟಿಯಲ್ಲಿ ಪತನಗೊಂಡಿದೆ ಎಂದು ರುಟೊ ತಿಳಿಸಿದ್ದಾರೆ.
ಒಗೊಲ್ಲಾ ಅವರು ವಾಯುಪಡೆಯ ಕಮಾಂಡರ್ ಮತ್ತು ರಕ್ಷಣಾ ಪಡೆಗಳ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ಕಳೆದ ವರ್ಷದ ಏಪ್ರಿಲ್‌ನಲ್ಲಿ ಕೀನ್ಯಾ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.