ಭೋಪಾಲ್ : ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಯುವತಿಯೊಬ್ಬಳನ್ನು ಒಂದು ತಿಂಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿ ಅತ್ಯಚಾರವೆಸಗಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ.
ಯುವತಿಗೆ ಮದುವೆಯಾಗುವಂತೆ ಮತ್ತು ಆಕೆಯ ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬೆಲ್ಟ್ ಹಾಗೂ ಪೈಪ್ನಿಂದ ಥಳಿಸಿ ತೀವ್ರ ಹಿಂಸೆ ನೀಡಿದ್ದಾನೆ. ಅಲ್ಲದೇಗಾಯಗಳಿಗೆ ಖಾರದ ಪುಡಿ ಎರಚಿ ಆಕೆ ಕಿರುಚುವುದು ಹೊರಗೆ ಕೇಳದಂತೆ ತುಟಿಗಳಿಗೆ ಗಮ್ ಹಾಕಿ ಅಂಟಿಸಿದು ಎಂದು ತಿಳಿದು ಬಂದಿದೆ.
ಯುವತಿ ಏ.16ರ ರಾತ್ರಿ ಬಂಧನದಿಂದ ತಪ್ಪಿಸಿಕೊಂಡು 5 ಕಿಮೀ ದೂರದಲ್ಲಿರುವ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಈ ವೇಳೆ ಸಂತ್ರಸ್ತೆಯ ಸ್ಥಿತಿ ಕಂಡ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ತೆರಳಿದ್ದಾಗ, ಅಕ್ರಮ ಮದ್ಯದೊಂದಿಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 294 (ಅಶ್ಲೀಲ ಭಾಷೆ), ಮತ್ತು 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಹಾಗೂ ಅಬಕಾರಿ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.