ಚಿತ್ರದುರ್ಗ ಏ. 20 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್ ಡಿಎ ಮೈತ್ರಿ ಕೂಟದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ದಲಿತರಿಗೆ ಮಗ್ಗಲ ಮುಳ್ಳು. ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಎಲ್ಲ ಸಮುದಾಯಗಳನ್ನು ಸಮಾನತೆಯಿಂದ ನೋಡಲಿಲ್ಲ. ಸಮಾನತೆಯ ದೃಷ್ಟಿ ಅವರಿಗಿಲ್ಲ ಎಂದು ವಕೀಲ ಎನ್.ಅನಂತನಾಯ್ಕ ವಾಗ್ದಾಳಿ ನಡೆಸಿದರು.
ನಗರದ ದುರ್ಗದ ಸಿರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳ ಮುಖಂಡರ ಜಿಲ್ಲಾ ಸಮಾರಂಭದಲ್ಲಿ ಮಾತನಾಡಿದ ಅವರು, ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಎಲ್ಲ ಸಮುದಾಯಗಳನ್ನು ಸಮಾನತೆಯಿಂದ ನೋಡಲಿಲ್ಲ. ಅವರಿಗೆ ಸಮಾನತೆ, ಸಂವಿಧಾನದ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಯಾವ ಕಾರಣಕ್ಕೂ ಅವರನ್ನು ಬಂಜಾರ, ಭೋವಿ, ಕೊರಚ, ಕೊರಮ, ಅಲೆಮಾರಿ ಸಮುದಾಯಗಳು ಬೆಂಬಲಿಸಬಾರದು ಎಂದು ಹೇಳಿದರು.
ಸ್ವಾತಂತ್ರ್ಯ ಬಂದ ನoತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಮೋದಿಸಲ್ಪಟ್ಟ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಭೋವಿ ಲಂಬಾಣಿ, ಕೊರಚ, ಕೊರಮ ಜಾತಿಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಾತಿಗಳನ್ನು ಪರಿಶಿಷ್ಟ ಪಟ್ಟಿಯಿಂದ ತೆಗೆಯಬೇಕು ಎನ್ನುವ ಉದ್ದೇಶದಿಂದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ, ಜನರ ಮಧ್ಯೆ ಗೊಂದಲ ಸೃಷ್ಟಿಸುವುದರ ಜೊತೆಗೆ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಅಂತವರ ಕುತಂತ್ರಕ್ಕೆ ಕಿವಿ ಕೊಡಬಾರದು ಎಂದು ತಿಳಿಸಿದರು.
ಭೋವಿ ಸಮುದಾಯದ ಹಿರಿಯ ಮುಖಂಡ ಒಕ್ಕೂಟದ ಅಧ್ಯಕ್ಷರಾದ ಡಾ.ರವಿ ಮಾಕಳಿ ಮಾತನಾಡಿ, ವಿವಿಧ ಆಯೋಗ, ಸಮಿತಿ, ಕೊರ್ಟ್ ಗೆ ಅರ್ಜಿಗಳ ಮೂಲಕ ಬಂಜಾರ, ಭೋವಿ, ಕೊರಚ, ಕೊರಮ ಅಲೆಮಾರಿ ಸಮುದಾಯಗಳನ್ನು ಪರಿಶಿಷ್ಠ ಜಾತಿ ಮೀಸಲಾತಿಯಿಂದ ಹೊರ ಹಾಕಿಸಲು ನಿರಂತರವಾಗಿ ಷಡ್ಯಂತರ ಮಾಡಿಸುತ್ತಲೇ ಬಂದಿರುವ ಗೋವಿಂದ ಕಾರಜೋಳ ಅವರನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನತೆ ತಿರಸ್ಕರಿಸಬೇಕು. ಈ ಅಪಾಯಕಾರಿ ವ್ಯಕ್ತಿ ಗೆದ್ದರೆ ಮತ್ತೆ ನಮ್ಮ ಸಮುದಾಯಗಳಿಗೆ ತೊಂದರೆ ಆಗುತ್ತದೆ. ಸಂಸತ್ ಗೆ ಹೋಗದಂತೆ ಈ ಸಂವಿಧಾನ ವಿರೋಧಿ ವ್ಯಕ್ತಿಯನ್ನು ಸೋಲಿಸಬೇಕು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನತೆ ಮತ್ತು ಬಂಧುಗಳು ತುಂಬಾ ಮುತುವರ್ಜಿಯಿಂದ ಈ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಲು ಕೋರಿದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ಮಾತನಾಡಿ, ಸಂವಿಧಾನದ ಉಳಿವಿಗಾಗಿ ಮತ್ತು ಸಮಾನತೆಯ ಪರವಾಗಿ ಇರುತ್ತೇನೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಡಾ. ರಾಜಾನಾಯ್ಕ್, ನ್ಯಾಯಮೂರ್ತಿಗಳಾಗ ವೇಂಕಟೇಶ್, ಭೋ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಭೋವಿ ನಿಗಮದ ಮಾಜಿ ನಿರ್ದೇಶಕ ಗೋಡೆಮನೆ ಹನಮಂತಪ್ಪ, ಜಯದೇವ ನಾಯ್ಕ,ರಾಘವೇಂದ್ರನಾಯ್ಕ್, ಚಿತ್ರದುರ್ಗ ಬಂಜಾರ ಜಿಲ್ಲಾಧ್ಯಕ್ಷರಾದ ನಾಗೇಂದ್ರ ನಾಯ್ಕ,ಚಿತ್ರದುರ್ಗ ಯುವಕರ ಮತ್ತು ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ರಾಮಾನಾಯ್ಕ್,ಮುಖಂಡರಾದ ಅನಿಲ್ ನಾಯ್ಕ, ಅನಂತಮೂರ್ತಿ ನಾಯ್ಕ, ತುಳಸಿ ರಮೇಶ್, ಲಿಂಗಾನಾಯ್ಕ, ರಾಜನಾಯ್ಕ,ಅರುu ಕಮಾರ್,ಯೋಗಮೂರ್ತಿನಾಯ್ಕ್,ರಮೇಶ್,ಗಣೇಶ್, ತಿಪ್ಪೇಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.