ಚಿತ್ರದುರ್ಗ : ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಸಹಾಯವನ್ನು ಮಾಡದೆ ಎಲ್ಲದಕ್ಕೂ ಸಹಾ ಚೆಂಬುವನ್ನು ನೀಡಿದೆ ಇದಕ್ಕೆ ತಕ್ಕ ಪಾಠವನ್ನು ಈ ಚುನಾವಣೆಯಲ್ಲಿ ಕಲಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಚಿತ್ರದುರ್ಗ ನಗರದ ದುರ್ಗದ ಸಿರಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಮೋದಿ ಸರ್ಕಾರ ಚೆಂಬು ನೀಡಿದೆ 27 ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಜಾರಿಗೊಳಿಸಿದೆ ಕೇಂದ್ರದಲ್ಲಿ ಗ್ಯಾರಂಟಿ ಯೋಜನೆ ತರುವುದಾಗಿ ಘೋಷಿಸಿದೆ. ನಾವು ಜನ ಕಲ್ಯಾಣ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಅಂಬಾನಿ, ಅದಾನಿ ಕಲ್ಯಾಣ ಗ್ಯಾರಂಟಿ ಅಲ್ಲ ರಾಜ್ಯದ ಸಿಎಂ ಸಿದ್ಧರಾಮಯ್ಯರಿಂದ ಸಮರ್ಥ ಆಡಳಿತ ಐದು ವರ್ಷಗಳ ಕಾಲ ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿದೆ ಸಿಎಂ, ಡಿಸಿಎಂ, ಸಚಿವರು, ಶಾಸಕರು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ನಮ್ಮ ಮುಂದೆ ಮಾದರಿ ಎರಡುಗಳಿವೆ, ರಾಹುಲ್ ಗ್ಯಾರಂಟಿ ಮಾಡಲ್ ಮತ್ತೊಂದು ಚಂಬು ಮಾಡಲ್ ಎಂದು ಮೋದಿ ವಿರುದ್ಧ ಟೀಕಿಸಿ, ಜನರು ಚಂಬು ಮಾಡ್ಬೇಕು, ಅಭಿವೃದ್ಧಿ ಮಾಡ್ಬೇಕು ಎಂದು ಅವರು, ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಯಾವ ಸಮಯದಲ್ಲೂ ಸಹ ಸಹಾಯ ಮಾಡಿಲ್ಲ ಎಂದು ಮನವಿ ಮಾಡಿದರು.
ಸಹಾ ಅದರ ಬಗ್ಗೆ ಮೋದಿಯವರು ಯಾವ ಮಾತನ್ನು ಆಡಿಲ್ಲ, ಜಿ.ಎಸ್.ಟಿ.ಯಲ್ಲಿ ನಮ್ಮ ಪಾಲನ್ನು ಸಹ ಸರಿಯಾದ ರೀತಿಯಲ್ಲಿ ನೀಡುವುದಿಲ್ಲ, ಬೇರೆ ರಾಜ್ಯಗಳಿಗೆ ಹೆಚ್ಚಿನ ರೀತಿಯ ಸಹಾಯವನ್ನು ಮಾಡುವ ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ ಮಾತ್ರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ.
ದೇಶದ ಎಲ್ಲರಿಗೂ 15 ಲಕ್ಷ ರೂ, ಖಾತೆಗಳನ್ನು ಹಾಕುತ್ತೇವೆ ಎಂದು ಹೇಳಿದ್ದರು 10 ವರ್ಷ ಕಳೆದರೂ ಸಹ ಅದರ ಬಗ್ಗೆ ಮಾತಿಲ್ಲ, ಇದುವರೆಗೂ ಯಾರ ಖಾತೆಗೂ ಸಹ ಹಣ ಬಂದಿಲ್ಲ, ರೈತರ ಆದಾಯ ಹೆಚ್ಚಿದವರು ಅವರು ಭೂಮಿಗೆ ನೀಡಿದ ಹಣವೂ ಸಹ ಬಾರದ ರೀತಿಯಲ್ಲಿ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ನೆರೆ ಬಂದಾಗಲೂ ಸಹಾ ಕೇಂದ್ರದಿಂದ ಯಾವ ಪರಿಹಾರವೂ ಸಹ ರಾಜ್ಯಕ್ಕೆ ಬಂದಿಲ್ಲ ಎಂದು ಸುರ್ಜೆವಾಲಾ ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಮತದಾರರಿಗೆ ಐದು ಗ್ಯಾರೆಂಟಿಗಳನ್ನು ನೀಡಿತ್ತು ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತದಾರರಿಗೆ ಭರವಸೆಯಂತೆ ತನ್ನ ಐದು ಗ್ಯಾರೆಂಟಿಗಳನ್ನು ನಡೆಸುತ್ತಿದೆ ಅದೇ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷದ ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರಿಗೆ ಐದು ಗ್ಯಾರೆಂಟಿಗಳನ್ನು ನೀಡಲಾಗಿದೆ. ಕೇಂದ್ರದಲ್ಲಿ ನಮ್ಮ ಅಧಿಕಾರಕ್ಕೆ ಬಂದರೆ ಇವುಗಳನ್ನು ಬೆಂಬಲಿಸುತ್ತದೆ ಕೂಟದ ಮಾತನ್ನು ಕಾಂಗ್ರೆಸ್ ಪಕ್ಷವು ಸಹ ತಪ್ಪುವುದಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಟಿ.ಬಿ.ಜಯಚಂದ್ರ, ಮಾಜಿ ಸಚಿವರಾದ ಹೆಚ್.ಆಂಜನೇಯ, ಶಾಸಕರುಗಳಾದ ರಘುಮೂರ್ತಿ, ವಿರೇಂದ್ರಪಪ್ಪಿ, ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, 2024ರ ಚಿತ್ರದುರ್ಗ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಬಿ.ಎ.ಚಂದ್ರಪ್ಪ, ಮಾಜಿ ಶಾಸಕರಾದ ಶ್ರೀಮತಿ ಪೂರ್ಣಿಮಾ, ಈ ಅಧ್ಯಕ್ಷ ಕೃಷ್ಣಮೂರ್ತಿ ಸೋಮಶೇಖರ್, ವಿಜಯಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.