ಚಿಕ್ಕಬಳ್ಳಾಪುರ : ದೇಶದಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ. ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕು ಅಂತಾ ಜನ ಭಾವಿಸಿದ್ದಾರೆ. ಆ ಉತ್ಸಾಹ ನನಗೆ ಕಾಣಿಸುತ್ತಿದೆ. ಅಲ್ಲದೇ ದೇವೇಗೌಡರು ಐ.ಎನ್.ಡಿ.ಐ.ಎ ಒಕ್ಕೂಟದ ಒಬ್ಬೊಬ್ಬರ ಬಗ್ಗೆಯೂ ಹೇಳಿದ್ದಾರೆ. ಅವರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಜಯಸಂಕಲ್ಪ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇವೇಗೌಡರನ್ನು ಹಾಡಿಹೊಗಳಿದ್ದಾರೆ.ಚಿಕ್ಕಬಳ್ಳಾಪುರದ ಸಹೋದರ ಸಹೋದರಿಯರಿಗೆ ನಮಸ್ಕಾರಗಳು’ ಅಂತ ಕನ್ನಡದಲ್ಲೇ ಭಾಷಣ ಶುರು ಮಾಡಿದ ಮೋದಿ, ಕೈವಾರ ತಾತಯ್ಯ, ವಿಶ್ವೇಶ್ವರಯ್ಯ ಮಣ್ಣಿನ ಜನರ ದರ್ಶನ ಪಡೆದದ್ದು ನನ್ನ ಸೌಭಾಗ್ಯ.
ದೇಶದಲ್ಲಿ ಜನರ ಉತ್ಸಾಹ ಹೆಚ್ಚಾಗಿದೆ. ಆ ಉತ್ಸಾಹ ನನಗೆ ಕಾಣ್ತಿದೆ. ಈ ವಯಸ್ಸಿನಲ್ಲಿ ದೇವೇಗೌಡ ಉತ್ಸಾಹ ನಮಗೆ ಪ್ರೇರಣೆ ಮತ್ತು ಮಾರ್ಗದರ್ಶನವಾಗಿದೆ. ಗೌಡರ ಆಶೀರ್ವಾದವೂ ನಮಗೆ ಸಿಕ್ಕಿದೆ. ಅವರ ಮಾತಿನಿಂದ ಪ್ರೇರಣೆ ಸಿಕ್ಕಿದೆ. ಅವರು ಈ ದೇಶದ ಹಿರಿಯ ರಾಜಕಾರಣಿ ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡ್ತೀವಿ ಎಂದು ಗುಣಗಾನ ಮಾಡಿದ್ದಾರೆ.
ದೇವೇಗೌಡರು ಐ.ಎನ್.ಡಿ.ಐ.ಎ ಒಕ್ಕೂಟದ ಒಬ್ಬೊಬ್ಬರ ಬಗ್ಗೆಯೂ ಹೇಳಿದ್ದಾರೆ. ಆ ಒಕ್ಕೂಟದ ಅಕ್ರಮಗಳ ಬಗ್ಗೆ ಹೇಳಿದ್ದಾರೆ. ಆ ಒಕ್ಕೂಟದಲ್ಲಿ ಹೇಳಿಕೊಳ್ಳುವ ನಾಯಕರು ಯಾರೂ ಇಲ್ಲ, ನಿರ್ದಿಷ್ಟ ಗುರಿಯೂ ಇಲ್ಲ. ಕೋಲಾರ, ಚಿಕ್ಕಬಳ್ಳಾಪುರದ ಜನ ಹೇಳ್ತಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಅಂತ.
ನನ್ನ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಬಂದು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ. ನಿಮ್ಮನ್ನ ನನ್ನ ಪರಿವಾರ ಅಂತ ಭಾವಿಸಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ದುಡಿಯುತ್ತೇನೆ. ನನ್ನ ಪ್ರತಿ ಕಣಕಣದಲ್ಲಿ ದೇಶ, ದೇಶದ ಜನರು ಇದ್ದಾರೆ. ನಾನು ಉತ್ತಮ ಗ್ಯಾರಂಟಿಗಳ ಜೊತೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಜನರು ಉಚಿತ ರೇಷನ್ ಸಿಗುತ್ತೆ ಅಂತ ಯೋಚನೆ ಮಾಡಿರಲಿಲ್ಲ. ಆದ್ರೆ ಮೋದಿ ಇವತ್ತು ಉಚಿತ ರೇಷನ್ ಕೊಡ್ತಿದ್ದಾರೆ. ಮುಂದಿನ 5 ವರ್ಷವೂ ಉಚಿತ ಪಡಿತರ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ. ಕರ್ನಾಟದ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಈಗ 70 ವರ್ಷ ಮೀರಿದ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಗ್ಯಾರಂಟಿ ನೀಡುತ್ತಿದ್ದೇನೆ.
ಮೋದಿ ಸರ್ಕಾರ ಎಸ್ಸಿ-ಎಸ್ಟಿ-ಒಬಿಸಿ ಸಮುದಾಯಗಳ ಪರವಾಗಿದೆ. ಈ ಹಿಂದೆ ಬಹಳಷ್ಟು ಎಸ್ಸಿ-ಎಸ್ಟಿ ಕುಟುಂಬಗಳಿಗೆ ಮೂಲ ಸೌಕರ್ಯ ಇರಲಿಲ್ಲ. ಅದೆಲ್ಲವನ್ನೂ ಮೋದಿ ಸರ್ಕಾರ ಮಾಡಿದೆ. 25 ಕೋಟಿ ಜನರನ್ನ ಬಡತನ ರೇಖೆಗಿಂತ ಮೇಲೆಕ್ಕೆ ತರುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಅಷ್ಟೇ ಅಲ್ಲ ಚಿಕ್ಕಬಳ್ಳಾಪುರದಲ್ಲಿ 14 ಸಾವಿರ, ಕೋಲಾರದಲ್ಲಿ 13 ಸಾವಿರ ಮನೆ ನಿರ್ಮಾಣ ಮಾಡಿಕೊಡುವ ಕೆಲಸ ಮೋದಿ ಮಾಡಿದ್ದಾರೆ. ಮುಂದೆ ಬಡವರಿಗಾಗಿ ದೇಶಾದ್ಯಂತ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸವನ್ನೂ ಮೋದಿ ಮಾಡ್ತಾರೆ ಎಂದು ಗ್ಯಾರಂಟಿಗಳನ್ನು ಪ್ರಸ್ತಾಪಿಸಿದ್ದಾರೆ.