ಚಿತ್ರದುರ್ಗ ಏ. 20 : ಕಾಂಗ್ರೆಸ್ ನವರ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿಯ ಸಂಕಲ್ಪ ಪತ್ರ ವರ್ಷದ ಕೂಳು ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ ನವೀನ್ ಹೇಳಿದರು.ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಕೊಟ್ಟ ಮಾತಿನಂತೆ ಬಿಜೆಪಿ ಮೋದಿ ನಡೆದು ಕೊಂಡಿದ್ದಾರೆ. ಸಂಕಲ್ಪ ಪತ್ರದಲ್ಲಿ ನಾವು ಆಂತರಿಕ ಮತ್ತು ಭಾಹ್ಯ ಸುರಕ್ಷೆಯನ್ನು ಮಾಡುವುದು, ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಿ ಅವರನ್ನು ಸಬಲೀಕರಣ ಮಾಡುವ ಯೋಜನೆ ತರುತ್ತೇವೆ. ಸಿದ್ದರಾಮಯ್ಯ ಕೊಟ್ಟಿರುವ ಉಚಿತ ವಿದ್ಯುತ್‍ಗೆ ಖಂಡಿಷನ್ ಹಾಕಿದ್ದಾರೆ. ಆದರೆ ಬಿಜೆಪಿ ನೀಡಿರುವ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಲ್ಲಿ ಸೋಲಾರ್ ಕೊಟ್ಟು, ಅದರಿಂದ ಉಚಿತ ವಿದ್ಯುತ್ ನೀಡವುದು, ಅಕ್ಕಿ ಈಗಾಗಲೇ ಕೊಡಲಾಗುತ್ತಿದೆ.
ಆಯುಷ್‍ಮಾನ್ ಭಾರತ್ ಕಾರ್ಡ್‍ಗಳನ್ನು ಕೊಡುತ್ತೇವೆ. ಪ್ರಧಾನ ಮಂತ್ರಿ ಅವಾಜ್ ಯೋಜನೆಯಲ್ಲಿ ಮನೆ ನೀಡುವುದು, ದೇಶದ ಮಧ್ಯಮ ವರ್ಗಕ್ಕೆ ಲಾಭ ಆಗುವಂತ ಯೋಜನೆಗಳನ್ನು ತರುವ ಕೆಲಸ ಮಾಡಿದ್ದೇವೆ. ರೈತರ ಆಧಾಯ ಹೆಚ್ಚು ಮಾಡುವ ನಿಟ್ಟಿನಲ್ಲಿ ಮಕ್ಕಳಿಗೆ ಸರ್ಕಾರಿ ಮೆಡಿಕಲ್ ಸೀಟ್‍ಗಳನ್ನು ಕೊಟ್ಟಿದ್ದೇವೆ. ಮಧ್ಯಮ ವರ್ಗ ಹಾಗೂ ಬಡ ಜನ ಪ್ರಯಾಣಿಸುವಂತ ಏರ್‍ಫೇರ್ ಕಡಿಮೆ ಮಾಡಿ ವಿಮಾನಗಳಲ್ಲಿ ಓಡಾಡುವ ರೀತಿಯಲ್ಲಿ ವಿಮಾನ ನಿಲ್ದಾಣ ಮಾಡಿದ್ದೇವೆ ಎಂದರು.
ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸಬಲೀಕರಣ ಮಾಡಲು, ಕೇಂದ್ರ ಸರ್ಕಾರ ಲಕ್ ಪತಿ ದೀದಿ ಎಂಬ ಯೋಜನೆಯನ್ನು ಮೂರು ಕೋಟಿ ಮಹಿಳೆಯರಿಗಾಗಿ ತಂದಿದೆ. ಮಹಿಳೆಯರ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಅನೇಕ ಯೋಜನೆಗಳನ್ನು ಈಗಾಗಲೇ ಕೊಟ್ಟಿದೆ.ಯುವ ಜನತೆಗೆ ಪ್ರಶ್ನೆ ಪತ್ರಿಕೆಗಳ ಸೋರಿಕೆ, ನೇಮಕಾತಿಯಲ್ಲಿನ ಹಗರಣಕ್ಕೆ ನಿಯಂತ್ರಣ ತರಲು, ಕೌಶಲ್ಯ ಸೇವಾ ಮನೋಭಾವ ತರುವ ಉದ್ಯಮಗಳನ್ನು ಆರಂಭಿಸುವ ಯೋಜನೆ ತರಲಾಗುತ್ತಿದೆ.
ಹಿರಿಯ ನಾಗರೀಕರ ಸಿನಿಯರ್ ಸಿಟಿಜನ್ಸ್ ಪೋರ್ಟಲ್ ಮೂಲಕ ಸೌಲಭ್ಯಗಳನ್ನು ಪೂರೈಸಲು, ಆನ್ ಲೈನ್ ಮೂಲಕ ಅವರ ಖಾತೆಗೆ ಹೋಗುವಂತೆ ಮಾಡಲಾಗುತ್ತದೆ. ಆರೋಗ್ಯ ಸೌಲಭ್ಯಗಳನ್ನು ಕೂಡ ಇದರಲ್ಲಿ ಜೋಡಿಸಲಾಗಿದೆ. ಹಿರಿಯ ನಾಗರೀಕರಿಗೆ ತೀರ್ಥ ಯಾತ್ರೆಗೆ ಹೋಗುವುದಾದರೆ ಆಯಾ ರಾಜ್ಯದ ಜೊತೆಗೆ ಸಂಪರ್ಕ ಕಲ್ಪಿಸಲಾಗುವುದು, ಶ್ರಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆ ನೀಡುವ ಮೂಲಕ ಅವರಿಗೆ ಸೌಲತ್ತು ನೀಡಲಾಗುತ್ತದೆ ಎಂದು ನವೀನ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ರೆಸ್ಟ್ ರೂಂಗಳನ್ನು ಮಾಡುವುದು, ವಿಶ್ವದ ಎಲ್ಲಾ ದೇಶಗಳಲ್ಲಿ ಭಾರತ ಸಂಬಂಧ ವೃದ್ದಿಯಾಗಲು ಐದು ಎಸ್ ಸೂತ್ರಗಳನ್ನು ಮಾಡಲಾಗಿದೆ. 2027 ರಲ್ಲಿ ಇನ್ನಷ್ಟು ಮುಂದೆ ಬರಲು ಬೇಕಾದ ಯೋಜನೆಗಳನ್ನು ನಾವು ಮಾಡುತ್ತಿದ್ದೇವೆ.ಮೂಲ ಭೂತ ಸೌಕರ್ಯಗಳಿಗೆ ವಿಶೇಷ ನೀಡುವುದು, ಸಾಂಸ್ಕೃತಿಕ ಕ್ಷೇತ್ರಗಳು ವಿಶ್ವ ಮಟ್ಟದಲ್ಲಿ ಮೇಲೆತ್ತುವ ಕೆಲಸ ಮಾಡಲಾಗುತ್ತದೆ. ಆಡಳಿತದಲ್ಲಿ ಭ್ರಷ್ಟಾಚಾರದ ಸೋಂಕಿಲ್ಲದೆ ಉತ್ತಮ ಆಡಳಿತ ನೀಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಸಂಕಲ್ಪ ಪತ್ರದಲ್ಲಿದೆ ಎಂದರು.
ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ದೇಶ ದಿವಾಳಿ ಮಾಡುವ ಯೋಜನೆಗಳನ್ನು ನೀಡಿದ್ದಾರೆ. ಉಚಿತ ಭರವಸೆಗಳನ್ನು ನೀಡಿದ್ದು, ಬೇರೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಲು 1 ಲಕ್ಷ ಸಾವಿರ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಚುನಾವಣಾ ಆಯೋಗದ ನಿಯಮ ಮೀರಿ ಜನರ ಬಳಿ 1 ಲಕ್ಷ ಹಣ ಕೊಡುತ್ತೇವೆ.
ನಿಮ್ಮ ಆಧಾರ್ ಕಾರ್ಡ್ ಕೊಡಿ ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಜನರು 1ಲಕ್ಷ ಹಣ ಕೊಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ಹಾಗೂ ಉಪ ಸಿಎಂ ಡಿಕೆಶಿ ಅವರು ಮೋಸ ಮಾಡುತ್ತಿದ್ದಾರೆ. ಇಂತಹ ಚುನಾವಣಾ ಅಕ್ರಮ ಮಾಡುವವರ ವಿರುದ್ದ ಚುನಾವಣಾ ಆಯೋಗಕ್ಕೆ ಜನರು ದೂರು ನೀಡಿ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾದ್ಯಮ ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಶಿವಣ್ಣಾಚಾರ್, ನಗರಸಭಾ ಸದಸ್ಯರಾದ ಸುರೇಶ್ ಹರೀಶ್,ಪರಮೇಶ್ ವೀರೇಶ್ ರವಿಕುಮಾರ್ ಇದ್ದರು.