ಮನೆಯಿಂದ ಎಷ್ಟೇ ಮೇಕಪ್ ಮಾಡಿ ಹೊರಟರೂ ಬಸ್ ಹಿಡಿದೋ, ವಾಹನದಲ್ಲೋ ತೆರಳಿ ಕಚೇರಿಗೆ ತಲುಪುವ ಹೊತ್ತಿಗೆ ಎಲ್ಲವೂ ಮಾಯವಾಗಿ ಇರಿಸು ಮುರಿಸಾಗುವಂತೆ ಮಾಡಿಬಿಡುತ್ತದೆ.
ಅಷ್ಟೇ ಅಲ್ಲದೆ ಬೆವರು ಹೆಚ್ಚಾಗಿ ಬರುವುದರಿಂದ ದುರ್ವಾಸನೆಯೂ ವಾಕರಿಕೆ ತರಿಸಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದು ಉತ್ತಮ.
ಸಮಯ ಸಿಕ್ಕಾಗ ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸಿ ನಂತರ ತಣ್ಣೀರಿನಿಂದ ಅಥವಾ ರೋಸ್ ವಾಟರ್ನಿಂದ ಮುಖ ತೊಳೆದುಕೊಳ್ಳಬೇಕು. ಇದು ಕೇವಲ ಚರ್ಮಕ್ಕೆ ಕಾಂತಿ ನೀಡುವುದಲ್ಲದೇ, ಮುಖದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡಲಿದೆ.
ಇನ್ನು ಬಿಸಿಲಿನಲ್ಲಿ ಕೆಲಸ ಮಾಡುವ ಮಹಿಳೆಯರು ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿಯೇ ದೊರೆಯಲಿದೆ. ಇದರ ಜತೆಗೆ ಮನೆಯಲ್ಲೇ ಹಣ್ಣುಗಳಿಂದ ಫೇಶಿಯಲ್ ಮಾಡಿಕೊಳ್ಳುವುದರಿಂದಲೂ ತ್ವಚೆಯ ನಿರ್ಜೀವ ಚರ್ಮ ಹೋಗಿ ಚರ್ಮ ಕಾಂತಿ ಹೆಚ್ಚಾಗುತ್ತದೆ.