ಕೈಯಲ್ಲಿ ದುಡ್ಡಿಲ್ಲ, ಕೇಳಿದವರು ಕೊಡಲಿಲ್ಲ ಅಂತ ನೀವು ಆ್ಯಪ್ಗಳಲ್ಲಿ ಲೋನ್ ತಗೋಬೇಕು ಅಂದುಕೊಂಡಿದ್ದೀರಾ? ಹಾಗಿದ್ದರೆ ಮೊದಲು ಈ ಸುದ್ದಿ ಓದಿ, ಆಮೇಲೆ ಲೋನ್ ತಗೋಬೇಕೋ ಬೇಡ್ವಾ? ಅಂತ ಡಿಸೈಡ್ ಮಾಡ್ತೀರಾ.
ಈ ಸಾಲ ನೀಡುವ ಅಪ್ಲಿಕೇಶನ್‌ಗಳ ಕಾರ್ಯವು ಅಗತ್ಯವಿರುವ ಗ್ರಾಹಕರಿಗೆ ತ್ವರಿತ ಸಾಲವನ್ನು ಒದಗಿಸುತ್ತೆ. ಆದರೆ, ಈ ಲೋನ್ ಆ್ಯಪ್‌ಗಳಿಂದ ಲೋನ್‌ಗಳನ್ನು ತೆಗೆದುಕೊಳ್ಳುವುದು ಬಹಳಷ್ಟು ಅಪಾಯ ಇರುತ್ತೆ. =ಫಿನ್‌ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್ (FACE) ಮತ್ತು ಸೆಂಟರ್ ಫಾರ್ ಫೈನಾನ್ಷಿಯಲ್ ಇನ್‌ಕ್ಲೂಷನ್ (CFI) ಫಿನ್‌ಟೆಕ್ ಲೆಂಡಿಂಗ್ ರಿಸ್ಕ್ ಬ್ಯಾರೋಮೀಟರ್ ಅನ್ನು ಪ್ರಾರಂಭಿಸಿದೆ.
ಆರ್‌ಬಿಐನ ಡಿಜಿಟಲ್ ಲೆಂಡಿಂಗ್‌ನ ವರ್ಕಿಂಗ್ ಗ್ರೂಪ್ ಭಾರತೀಯ ಆಂಡ್ರಾಯ್ಡ್ ಬಳಕೆದಾರರಿಗೆ ಸುಮಾರು 1,100 ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ಕಂಡುಹಿಡಿದಿದೆ, ಅವುಗಳಲ್ಲಿ ಸುಮಾರು 600 ಕಾನೂನುಬಾಹಿರವಾಗಿವೆ.
ಈ ಸಮೀಕ್ಷೆಯಲ್ಲಿ ಶೇಕಡಾ 83 ರಷ್ಟು ಜನರು ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆಯುವಲ್ಲಿ ಸೈಬರ್ ವಂಚನೆಯ ಅಪಾಯವಿದೆ ಎಂದು ಹೇಳಿದ್ದಾರೆ. ಈ ಡಿಜಿಟಲ್ ಸಾಲದಾತರು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಪುಟಗಳನ್ನು ಸೃಷ್ಟಿಸುತ್ತಾರೆ. ಸಾಲದ ನೆಪದಲ್ಲಿ ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಮತ್ತು ಕಡಿಮೆ ಬಡ್ಡಿಯ ಸಾಲವನ್ನು ನೀಡುವುದಾಗಿ ಹೇಳಿಕೊಳ್ಳುತ್ತಾರೆ.
ಲೋನ್ ಆ್ಯಪ್ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.
ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ ಹಾಕಿದೆ
ಆನ್ಲೈನ್ನಲ್ಲಿ ಆ್ಯಪ್ ಮೂಲಕ ಸಾಲ ನೀಡಿ, ನಂತರ ವಂಚನೆ ನಡೆಸುವ ಮತ್ತು ಸಾಲ ಮರುಪಾವತಿಸಿದ ಬಳಿಕವೂ ಕಿರುಕುಳ ನೀಡುವ ವಿವಿಧ ಆ್ಯಪ್ಗಳಿವೆ. ಈಗಾಗಲೇ ಚೀನಾ ಮೂಲಕ ವಂಚಕ ಸಾಲದ ಆ್ಯಪ್ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ಗಳಿಂದ ಸಾರ್ವಜನಿಕರು ದೂರವಾಗಲು ಆರ್ಬಿಐ ಹೊಸ ಯೋಜನೆ ಹಾಕಿದೆ. ಲೋನ್ ಆ್ಯಪ್ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ಬಿಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.