ಚಿತ್ರದುರ್ಗ : ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತವಾಗಿರುವ ನೌಕರರು, ಮತಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತದಾನ ಸೇವಾಕೇಂದ್ರ ತೆರೆಯಲಾಗಿದೆ.
ಫಾರಂ 12 ನೀಡಿದ ಎಲ್ಲಾ ಅರ್ಹ ಮತದಾರರು ಏಪ್ರಿಲ್ 25 ರವರೆಗೆ ಈ ಕೇಂದ್ರಗಳಲ್ಲಿ ಮತಚಲಾಯಿಸಲು ಅವಕಾಶವಿದೆ. ಇದರ ಸದುಯೋಗ ಪಡೆದುಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.