Breaking
Tue. Dec 24th, 2024

ಮತದಾನ ಶಾಂತಿಯುತವಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ…!

ಚಿತ್ರದುರ್ಗ : ಮತದಾನ ಶಾಂತಿಯುತವಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ 1808 ಜನರ ವಿರುದ್ಧ ಕಾನೂನು ಪ್ರಕ್ರಿಯೆ ಜರುಗಿಸಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಎದುರಿಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 8 ಜನರಿಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದರು.  ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾನ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. 

ಜಿಲ್ಲೆಗೆ ಎರಡು ಸಿ.ಆರ್.ಪಿ.ಎಫ್ ತುಕಡಿಗಳು ಆಗಮಿಸಿವೆ. ಇದುವರೆಗೂ ಜಿಲ್ಲೆಯಲ್ಲಿ ಗಲಭೆ ಉಂಟಾಗುವ 41 ಕಡೆ ಪೊಲೀಸ್ ಬಲ ಪ್ರದರ್ಶನವನ್ನು ಮಾಡಲಾಗಿದೆ. 36 ಕಡೆ ರೂಟ್ ಮಾರ್ಚ್ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೈರ್‍ಲೆಸ್ ಸಂವಹನ ಸ್ಥಾಪಿಸಲಾಗಿದೆ. 20 ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ಪಿ.ಎಸ್.ಐ ನೇತೃತ್ವದಲ್ಲಿ ಸೆಕ್ಟರ್ ಪೊಲೀಸ್ ತಂಡ, 4 ಸೆಕ್ಟರ್ ಸಂಚಾರಿ ಪೊಲೀಸ್ ತಂಡಗಳ ಮೇಲೆ ಸರ್ಕ್‍ಲ್ ಇನ್ಸೆಪ್ಟರ್‍ಗಳ ಪೊಲೀಸ್ ತಂಡ, 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒರ್ವ ಡಿವೈಎಸ್‍ಪಿ ಹಾಗೂ 2 ಎ.ಎಸ್.ಪಿ ಹಾಗೂ ಒಬ್ಬ ಎಸ್ಪಿ ಕರ್ತವ್ಯ ನಿರ್ವಹಿಸಲಿದ್ದಾರೆ. 

ಒಟ್ಟಾರೆ 3300 ಪೊಲೀಸ್ ಸಿಬ್ಬಂದಿಗಳನ್ನು ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 950 ಗೃಹ ರಕ್ಷಕರು, 6 ಕೆ.ಎಸ್.ಆರ್.ಪಿ.ಸಿ ತುಕಡಿ ಹಾಗೂ ಸಿ.ಆರ್.ಪಿ.ಎಫ್ ತುಕಡಿಗಳು ಇರಲಿವೆ. ಜಿಲ್ಲೆಯಲ್ಲಿ 280 ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಉಳಿದಂತೆ ಪ್ರತಿ ಮತಗಟ್ಟೆ ಒರ್ವ ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಮತದಾನ ತರುವಾಯ ಸ್ಟ್ರಾಂಗ್ ರೂಮ್ ಹಾಗೂ ಮತ ಎಣಿಕೆ ದಿನ ಮತ ಎಣಿಕೆ ಕೇಂದ್ರಗಳನ್ನು ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು. 

Related Post

Leave a Reply

Your email address will not be published. Required fields are marked *