ಚಿತ್ರದುರ್ಗ, ಏಪ್ರಿಲ್.23 : ಇದೇ ತಿಂಗಳ 26 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುವಂತೆ ಹೊಳಲ್ಕೆರೆ ತಹಶೀಲ್ದಾರ್ ಬೀಬಿಫಾತಿಮ ಜನತೆಯಲ್ಲಿ ಮನವಿ ಮಾಡಿದರು.
ಹೊಳಲ್ಕೆರೆ ಕಸಬಾ ಹೋಬಳಿಯ ಲೋಕದೊಳಲು ಗ್ರಾಮದಲ್ಲಿ ನಡೆದ ಲಕ್ಷ್ಮಿರಂಗನಾಥಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ತಹಶೀಲ್ದಾರ್ ಬೀಬಿ ಫಾತಿಮ ನಿಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಘೋಷ ವಾಕ್ಯದಡಿ ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕೆಂದು ವಿನಂತಿಸಿದರು.