ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿದೆ ಮತದಾನ. ಮತದಾನಕ್ಕಾಗಿ ಏಪ್ರಿಲ್ 25ರ ರಾತ್ರಿಯೇ ಬೆಂಗಳೂರಿನಿಂದ ಊರಿಗೆ ತೆರಳಲು ಜನರು ಸಜ್ಜಾಗಿದ್ದಾರೆ. ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ಮೈಸೂರಿಗೆ ಹೋಗುವ ಬಸ್ಗೆ ಡಿಮ್ಯಾಂಡ್ ಹೆಚ್ಚಿದ್ದು, ರಾಜಕೀಯ ಪಕ್ಷಗಳಿಂದ ಕರಾವಳಿ ಭಾಗಕ್ಕೆ ಹೆಚ್ಚುವರಿ 300ಕ್ಕೂ ಅಧಿಕ ಬಸ್ ಬುಕ್ ಆಗಿವೆ.
ಪ್ರಮುಖವಾಗಿ 7 ಜಿಲ್ಲೆಗಳಿಗೆ ಹೆಚ್ಚುವರಿ ಬಸ್ಗಳನ್ನು ಒದಗಿಸುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಖಾಸಗಿ ಬಸ್ ದರ ಒನ್ ಟು ಡಬಲ್ ಆಗಿದೆ. ಮತದಾನಕ್ಕೆ ಊರಿಗೆ ತೆರಳಲು ಜನರೇ ಬಸ್ ಬುಕ್ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು, ಬುಕ್ಕಿಂಗ್ ಆ್ಯಪ್ಗಳಲ್ಲಿ ದರ ಹೆಚ್ಚು ಮಾಡಲಾಗಿದೆ. ಇನ್ನು ಖಾಸಗಿ ಬಸ್ಗಳು ಕೂಡ 300-500 ರೂ. ದರ ಏರಿಕೆ ಮಾಡಿವೆ. ಈ ಬಗ್ಗೆ ಮಾತಾನಾಡಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ನಟರಾಜ್ ಮತ್ತು ಶರ್ಮಾ, ಚುನಾವಣೆ ನಂತರ ದರ ಹೆಚ್ವಳ ಮಾಡಲ್ಲ ಬೇಸಿಗೆಯಲ್ಲಿ ಕಾಮನ್ಆಗಿ ಸ್ವಲ್ಪ ದರ ಹೆಚ್ಚಳ ಆಗಿದೆ ಎಂದರು.
ಯಾವ ಜಿಲ್ಲೆಗೆ ಎಷ್ಟು ಬಸ್..?
- ಬೆಂಗಳೂರು- ಮಂಗಳೂರು: 350 ಖಾಸಗಿ ಬಸ್
- ಬೆಂಗಳೂರು – ಉಡುಪಿ: 150 ಖಾಸಗಿ ಬಸ್
- ಬೆಂಗಳೂರು – ಚಿಕ್ಕಮಗಳೂರು: 65 ಖಾಸಗಿ ಬಸ್
- ಬೆಂಗಳೂರು-ಹಾಸನ: 70 ಖಾಸಗಿ ಬಸ್
- ಬೆಂಗಳೂರು- ಚಿತ್ರದುರ್ಗ: 201 ಖಾಸಗಿ ಬಸ್
- ಬೆಂಗಳೂರು- ಮೈಸೂರು: 100 ಖಾಸಗಿ ಬಸ್
- ಬೆಂಗಳೂರು- ಚಾಮರಾಜನಗರ: 50 ಖಾಸಗಿ ಬಸ್
- ಖಾಸಗಿ ಬಸ್ಗಳ ದರ
- ಬೆಂಗಳೂರು-ಮಂಗಳೂರು
- ಸಾಮಾನ್ಯ ದಿನದ ದರ: 500-1000 ರೂ.
- ಏಪ್ರಿಲ್ 25 ದರ: 1600-1950 ರೂ.
- ಬೆಂಗಳೂರು – ಉಡುಪಿ
- ಸಾಮಾನ್ಯ ದಿನದ ದರ: 600-950 ರೂ.
- ಏಪ್ರಿಲ್ 25 ದರ: 1650-1950 ರೂ.
- ಬೆಂಗಳೂರು – ಚಿಕ್ಕಮಗಳೂರು
- ಸಾಮಾನ್ಯ ದಿನದ ದರ: 550-600 ರೂ.
- ಇಂದಿನ ದರ: 1100-1600 ರೂ.
- ಬೆಂಗಳೂರು-ಹಾಸನ
- ಸಾಮಾನ್ಯ ದಿನದ ದರ: 650-850 ರೂ.
- ಏಪ್ರಿಲ್ 25 ದರ: 1200-1600 ರೂ.
- ಬೆಂಗಳೂರು- ಚಿತ್ರದುರ್ಗ
- ಸಾಮಾನ್ಯ ದಿನದ ದರ: 450-650 ರೂ.
- ಏಪ್ರಿಲ್ 25 ದರ: 800-1200 ರೂ.
ಬಸ್ಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ, ಅಭ್ಯರ್ಥಿಗಳು ಖಾಸಗಿ ಬಸ್ ಬುಕ್ ಮಾಡಿ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯುವ ಪ್ರಯತ್ನ ಕೂಡ ನಡೆಯುತ್ತಿದೆ.
ಬಸ್ ದರ ಹೆಚ್ಚಳದ ಬಗ್ಗೆ ಮಾತಾನಾಡಿದ ಬಸ್ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್ ಶ್ರೀನಿವಾಸ್ ದರ ಹೆಚ್ವಳದ ಬಗ್ಗೆ ಸಾರಿಗೆ ಇಲಾಖೆ ಕಡಿವಾಣ ಹಾಕಬೇಕು ನಾವು ಸಾರಿಗೆ ಇಲಾಖೆಗೆ ದರ ಹೆಚ್ಚಳದ ಬಗ್ಗೆ ದೂರು ಕೊಡುತ್ತೇವೆ ಎಂದರು.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.