ಚಿತ್ರದುರ್ಗ : ಎರಡನೇ ಹಂತದ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮತದಾನ ಜರುಗಲಿದೆ. ಮತದಾನದ ದಿನವನ್ನು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ.
ಅಂದು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ಸಹ ಉದ್ಯೋಗಿಗಳಿಗೆ ರಜೆ ನೀಡಲಿವೆ. ಅಗತ್ಯ ಸೇವೆ ಹಾಗೂ ಮತದಾನ ಪ್ರಕ್ರಿಯಲ್ಲಿ ಕರ್ತವ್ಯ ನಿತರಾಗಿರುವ ಸಿಬ್ಬಂದಿ ಹೊರತು ಪಡಿಸಿ ಎಲ್ಲಾ ಅರ್ಹ ಮತದಾರರು ಏಪ್ರಿಲ್ 26 ರಂದು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದ್ದಾರೆ.