Breaking
Wed. Dec 25th, 2024

ಏಕನಾಥೇಶ್ವರಿ ಅಮ್ಮನವರ ಜಾತ್ರೆ ಏ.23ರಿಂದ ಆರಂಭ…!

ಚಿತ್ರದುರ್ಗ : ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಒಂದು ವಾರದ ಅವಧಿಯ ಏಕನಾಥೇಶ್ವರಿ ಅಮ್ಮನವರ ಜಾತ್ರೆ ಏ.23ರಿಂದ ಆರಂಭಗೊಂಡಿದ್ದು,

ಮೇ.7ರಂದು ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಮುಕ್ತಾಯ ಸಮಾರಂಭ.

27 ರಂದು ಕಂಕಣ ಧಾರಣೆ, ಭಂಡಾರ ಪೂಜೆ, ರುದ್ರಾಭಿಷೇಕ, ರಾತ್ರಿ ಎಂಟು ಗಂಟೆಯಿಂದ ರಾಜ ಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ.

28 ರಂದು ರಾತ್ರಿ ಎಂಟು ಗಂಟೆಯಿಂದ ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜೆ.

30 ರಂದು ರಾತ್ರಿ ಏಕನಾಥೇಶ್ವರಿ ಅಮ್ಮನಿಗೆ ಭಂಡಾರ ಪೂಜೆ. ಮೇ.1 ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರದ ಪೂಜೆ, ಏಕನಾಥೇಶ್ವರಿ ಅಮ್ಮನನ್ನು ಬೆಟ್ಟದಿಂದ ಕೆಳಗಿಳಿಸಲಾಯಿತು. 

ಅರ್ಚಕರ ಮನೆಯಲ್ಲಿ ಮಕ್ಕಳಿಗೆ ಬೇವಿನ ಉಡುಗೆ ಸೇವಾ ಅಶ್ವೋತ್ಸವದಲ್ಲಿ ಕಾಮನಬಾವಿ ಹೊಂಡದಲ್ಲಿ ಗಂಗಾಪೂಜೆ. ನಂತರ ಜಿಲ್ಲಾಧಿಕಾರಿ ಬಂಗಲೆ ಹಾಗೂ ಕೆಳಗೋಟೆ ಭಕ್ತಾಧಿಗಳಿಂದ ಪೂಜೆ.

2 ರಂದು ಸಂಜೆ ಏಳಕ್ಕೆ ಕರುವಿನಕಟ್ಟೆ ಮತ್ತು ಪಾದಗಟ್ಟೆ, ವಿದ್ಯಾನಗರ, ಮೆದೇಹಳ್ಳಿ ಭಕ್ತಾಧಿಗಳಿಂದ ಪೂಜೆ.

3 ರಂದು ಬೆಳಿಗ್ಗೆ ಎಂಟು ಗಂಟೆಯಿಂದ ರಾಜ ಬೀದಿಗಳಲ್ಲಿ ಅಶ್ವ ಮತ್ತು ಹೂವಿನ ಉತ್ಸವ, ಕರುವಿನಕಟ್ಟೆ ಮತ್ತು ಜೋಗಿಮಟ್ಟಿ ರಸ್ತೆಯ ಭಕ್ತಾಧಿಗಳಿಂದ ಮಹಾ ಮಂಗಳಾರತಿ.

4 ರಂದು ಸಂಜೆ 5-30 ಗಂಟೆಗೆ ಜಾತ್ರಾ ಬಯಲಿನ ಪಾದಗಟ್ಟೆಯಲ್ಲಿ ಏಕನಾಥೇಶ್ವರಿ ಅಮ್ಮನವರ ಸಿಡಿ ಉತ್ಸವ. ಮಹಾಮಂಗಳಾರತಿ. 5 ರಂದು ಸಂಜೆ 6-30ಕ್ಕೆ ಬೆಟ್ಟದ ಮೇಲೆ ಓಕಳಿ ಉತ್ಸವ.

ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯ ಜಾತ್ರಾ ಮಹೋತ್ಸವದಲ್ಲಿ ಕಾಣಿಸಿಕೊಂಡರು ಏಕನಾಥೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಮೀನ್ದಾರ ದೊರೆಸ್ವಾಮಿ ಮನವಿ ಮಾಡಿದರು.

Related Post

Leave a Reply

Your email address will not be published. Required fields are marked *