Breaking
Tue. Dec 24th, 2024

ಪ್ರಶಿಕ್ಷಣಾರ್ಥಿಗಳ ಚಟುವಟಿಕೆಯಿಂದ ರಂಗಭೂಮಿಗೆ ಸಹಕಾರಿ ; ಸ್ಪಷ್ಟ ಮಾತುಕತೆ, ದೇಹದ ನಿಲುವು ಪ್ರತಿಯೊಬ್ಬ ಶಿಕ್ಷಕನ ಸಂಪತ್ತು…!

ಚಿತ್ರದುರ್ಗ   : ರಂಗಭೂಮಿ ಕಲೆಯಿಂದ ಯಾವ ಕಲೆಗಳೂ ಹೊರತಾಗಿಲ್ಲ. ಸಂಗೀತ, ನಾಟಕ, ನೃತ್ಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ರಂಗಭೂಮಿ ಹಾಸುಹೊಕ್ಕಾಗಿದೆ. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಪ್ರತಿಯೊಂದೂ ಅಂಶಗಳನ್ನು ಕಲಿಯಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ಅಭಿಪ್ರಾಯಪಟ್ಟರು.

ನಗರದ ಕೋಟೆ ಮುಂಭಾಗವಿರುವ ಶ್ರೀಮತಿ ಹೇಮಾವತಿ ಕುವೆಂಪು ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಬಿ.ಐ.ಡಿ.ಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ರಂಗಸೌರಭ ಶಿಕ್ಷಣ ಸಂಸ್ಥೆಯ ವತಿಯಿಂದ ರಂಗಭೂಮಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. 

ಶಾಲೆಯ ಪ್ರಾರಂಭದ ತರಗತಿಗಳು ಸಾಂಸ್ಕೃತಿಕವಾಗಿ ಪ್ರಾರಂಭಗೊಂಡು ಶಾಲಾ ವಾರ್ಷಿಕೋತ್ಸವದಿಂದ ಅಂತ್ಯವಾಗುವುದಿಲ್ಲ. ಮನರಂಜನೀಯವಾಗಿ ಪ್ರಶಿಕ್ಷಣಾರ್ಥಿಗಳು ಬೋಧನಾ ಪ್ರಕ್ರಿಯೆಯಲ್ಲಿ ತೊಡಗಬೇಕು. ಅದಕ್ಕೆ ಬೇಕಾದ ಸವಲತ್ತುಗಳು ರಂಗಭೂಮಿಯಿಂದ ಪಡೆಯಬಹುದು. ವೇಷಭೂಷಣ, ಪ್ರಸಾದ, ಮುಖವಾಡ, ವರ್ಣಕಲೆ ಮುಂತಾದ ಕಸರತ್ತಿನಿಂದ ಕೂಡಿದ ಪಾಠೋಪಕರಣಗಳು ಮತ್ತು ಪರಿಕರಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರಿಂದ ಪರಿಣಾಮಕಾರಿ ಬೋಧನೆಗೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. 

ಪ್ರಾಚಾರ್ಯ ಡಾ.ಜಿ.ದಾಸಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಶಿಕ್ಷಣಾರ್ಥಿಗಳು ಚಟುವಟಿಕೆಯಿಂದ ರಂಗಭೂಮಿ ಸಹಕಾರಿಯಾಗಿದೆ. ಸ್ಪಷ್ಟ ಮಾತುಕತೆ, ದೇಹದ ನಿಲುವು ಪ್ರತಿಯೊಬ್ಬ ಶಿಕ್ಷಕನ ಸಂಪತ್ತಾಗಬೇಕು.

ಉಪನ್ಯಾಸಕರಾದ ಡಾ.ಪಿ.ರಾಧಮ್ಮ, ಡಾ.ಎಂ.ಎಸ್.ಲಕ್ಷ್ಮೀದೇವಿ, ಕೆ.ತ್ರಿವೇಣಿ, ಎಂ.ಉಷಾಕಿರಣ, ಟಿ.ತಿಪ್ಪೇರುದ್ರಯ್ಯ ಹಾಗೂ ಬಿ.ಪಾತಲಿಂಗಪ್ಪ ಮುಖ್ಯಅತಿಥಿಗಳಾಗಿ ಇದ್ದರು. ನೀನಾಸಂ ಪದವೀಧರ ಹಾಗೂ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ದ್ವಿತೀಯ ಪ್ರಶಿಕ್ಷಣಾರ್ಥಿಗಳು ಮೂಢನಂಬಿಕೆ, ಬಾಲ್ಯವಿವಾಹ, ಮತದಾನ, ವರದಕ್ಷಿಣೆ, ಬಾಲಕಾರ್ಮಿಕ, ಅನಕ್ಷರತೆ, ಭ್ರಷ್ಟಾಚಾರ ಹಾಗೂ ಜಾತಿಪದ್ಧತಿ ನಾಟಕಗಳ ಪ್ರದರ್ಶನ. ಐಶ್ವರ್ಯ, ಗೀತಾಂಜಲಿ, ಶಿವಮ್ಮ ಪ್ರಾರ್ಥಿಸಿದರು. ಚಿತ್ರ ಸ್ವಾಗತಿಸಿದರು. ಸಂತೋಷಕುಮಾರಿ ನಿರೂಪಣೆ ಮಾಡಿದರು.

Related Post

Leave a Reply

Your email address will not be published. Required fields are marked *