ಚಳ್ಳಕೆರೆ : ಲೋಕಸಭಾ ಚುನಾವಣೆ ಕರ್ತವ್ಯ ವೇಳೆ ಹೃದಯಘಾತದಿಂದ ಕರ್ತವ್ಯ ನಿರತ ಎಪಿಆರ್ ಓ ಶಿಕ್ಷಕಿ ಯಶೋದಮ್ಮ(55) ಆಯ್ಕೆಯಾಗಿದ್ದಾರೆ.
ತಾಲೂಕಿನ ಹೊಟ್ಲೆಪನಹಳ್ಳಿ 202 ಮತ ಕೇಂದ್ರದಲ್ಲಿ ಕರ್ತವ್ಯ ನಿರತರಾಗಿ ಕುಸಿದು ಬಿದ್ದಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಚಳ್ಳಕೆರೆ ನಗರದ ವಿಠಲನಗರದಲ್ಲಿ ವಾಸಮಾಡುತ್ತಿದ್ದರು ಇಂದು ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿದ್ದರು.
ಆಸ್ಪತ್ರೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹಾಗೂ ಚುನಾವಣಾಧಿಕಾರಿಗಳು ಭೇಟಿ ನೀಡಿ ಮೃತ ಯಶೋದಮ್ಮ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಾದ ಕುಮಾರಸ್ವಾಮಿ, ಎಸ್ಪಿ ಎಸ್ ಜೆ ಕುಮಾರಸ್ವಾಮಿ ಸಹಾಯಕ ಚುನಾವಣಾಧಿಕಾರಿ ಆನಂದ ಡಿವೈಎಸ್ ಪಿ ಟಿ.ಬಿ.ರಾಜಣ್ಣ,ಸೇರಿದಂತೆ ಅಧಿಕಾರಿಗಳು ಇದ್ದರು.