ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು ನಡೆದ ಮತದಾನದಲ್ಲಿ ಸಂಜೆ 5 ಗಂಟೆಗೆ ಶೇ.67ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ ಮತ ಚಲಾಯಿಸುತ್ತಿದ್ದಾರೆ.
ವಿಧಾನ ಸಭಾ ಕ್ಷೇತ್ರವಾರು ಚಳ್ಳಕೆರೆ ಕ್ಷೇತ್ರದಲ್ಲಿ ಶೇ.67.86, ಚಿತ್ರದುರ್ಗ ಶೇ.65.10, ಹಿರಿಯೂರು ಶೇ.65.96, ಹೊಳಲ್ಕೆರೆ ಶೇ.67.77, ಹೊಸದುರ್ಗ ಶೇ.65.42,ಮೊಳಕಾಲ್ಮೂರು ಶೇ.70.96, ಪಾವಗಡ ಶೇ.63.98, ಶಿರಾ ಶೇ.68.34 ಮತದಾನವಾಗಿದೆ.