ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಗೆ ಹಿಂದಿ ಮತ್ತು ತೆಲುಗಿನಲ್ಲಿ ಭಾರೀ ಬೇಡಿಕೆಯಿದೆ. ಇತ್ತೀಚೆಗೆ ಸಲಾರ್-2 ಸಿನಿಮಾದಲ್ಲಿ ಕಿಯಾರಾ ಕಾಣಿಸಿಕೊಳ್ತಾರೆ ಎಂಬ ಸುದ್ದಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಅಸಲಿಗೆ ಅವರು ಇರುತ್ತಾರಾ? ಎಂಬುದು ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ಉತ್ತರ ಸಿಕ್ಕಿದೆ.
ಸಲಾರ್’ ಪಾರ್ಟ್ 2ನಲ್ಲಿ ಕಿಯಾರಾ ಅಡ್ವಾಣಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಹರಿದಾಡುತ್ತಿರುವ ಸುದ್ದಿ ಸುಳ್ಳು ಎನ್ನಲಾಗುತ್ತಿದೆ. ನಾಯಕಿಯ ಆಯ್ಕೆ ವಿಚಾರದಲ್ಲಿ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದು ಕೂಡ ಸುಳ್ಳು. ಮುಂದಿನ ದಿನಗಳಲ್ಲಿ ಚಿತ್ರತಂಡ ಯಾವ ಮಾಹಿತಿ ರಿವೀಲ್ ಮಾಡಲಿದೆ ಎಂದು ಕಾಯಬೇಕಾಗಿದೆ.
ಕಿಯಾರಾ ಸದ್ಯ ರಾಮ್ ಚರಣ್ ಜೊತೆಗಿನ ‘ಗೇಮ್ ಚೇಂಜರ್’ ಸಿನಿಮಾ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದು ಕಡೆ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕಿಯಾರಾ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಇದೆ. ಚಿತ್ರತಂಡದ ಅಧಿಕೃತ ಮಾಹಿತಿಗಾಗಿ ಕಾಯಬೇಕಾಗಿದೆ.
ಸಲಾರ್ ಪಾರ್ಟ್ 1ರಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ನಟಿಸಿದ್ದರು. ಚಿತ್ರಕ್ಕೆ ಉತ್ತಮ ಪ್ರಶಂಸೆಯಾಗಿತ್ತು. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.