ರಾಷ್ಟ್ರಮಟ್ಟದಲ್ಲಿ 339ನೇ ರ್ಯಾಂಕ್‌ ಪಡೆದು, ಹೊಸ ದಾಖಲೆಯೊಂದಿಗೆ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ…!

ಚಿತ್ರದುರ್ಗ  : ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಎನ್‌. ಮದನ್‌ ಶೇಕಡ 99.12 ಪರ್ಸಂಟೈಲ್‌ನೊಂದಿಗೆ ರಾಷ್ಟ್ರಮಟ್ಟದಲ್ಲಿ 339ನೇ ರ್ಯಾಂಕ್‌ ಪಡೆದು, ಹೊಸ ದಾಖಲೆಯೊಂದಿಗೆ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

 ಕ್ರಮವಾಗಿ ಕಾಲೇಜಿನ ವಿದ್ಯಾರ್ಥಿಗಳಾದ ಸೃಜನ್‌ ಪಿ ಟಿ, ರೋಹಿಣಿ ಜೆ, 629, 739ನೇ ರ್ಯಾಂಕ್‌ ಪಡೆದು ರಾಷ್ಟ್ರಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕಾಲೇಜಿನ 43 ವಿದ್ಯಾರ್ಥಿಗಳು 90 ಕ್ಕಿಂತ ಹೆಚ್ಚಿನ ಪರ್ಸಂಟೈಲ್ ಗಳಿಸಿರುವುದು “ಎಸ್‌ ಆರ್‌ ಎಸ್‌ʼʼ ನ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಒಟ್ಟು 78 ವಿದ್ಯಾರ್ಥಿಗಳು “ಜೆಇಇ ಮೈನ್ಸ್‌” ಎರಡನೇ ಸ್ಲಾಟ್‌ನಲ್ಲಿ ಅತ್ಯುತ್ತಮ ಅಂಕಗಳಿಸಿ ʼಜಿಇಇ ಅಡ್ವಾನ್ಸ್ಡ್‌ ಗೆ ಅರ್ಹತೆ ಗಳಿಸಿದ್ದಾರೆ. 

SRS ಪಿಯು ಕಾಲೇಜು ಜೆಇಇ ಮೈನ್ಸ್‌ ಮತ್ತು ಅಡ್ವಾನ್ಸ್ಡ್ ವಿದ್ಯಾರ್ಥಿಗಳಿಗೆ ವಿಶೇಷ ಸ್ಟಾರ್‌ ಬ್ಯಾಚ್‌ಗಳನ್ನು ಹೊಂದಿದ್ದು, ಜೆಇಇ ಪರಿಣಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಮಯೋಚಿತ ತರಬೇತಿ ನೀಡಲಾಗುತ್ತಿದೆ. ಉತ್ತರ ಭಾರತ ಹಾಗೂ ಹೈದರಾಬಾದ್‌ನಿಂದ ವಿಷಯ ತಜ್ಞರು ಬರುತ್ತಿದ್ದು, ಕಳೆದ ವರ್ಷದಿಂದ SRS ನಲ್ಲಿಯೇ ಪೂರ್ಣಪ್ರಮಾಣದಲ್ಲಿ ಲಭ್ಯವಿದ್ದಾರೆ. 

ಈ ಭಾಗದ ಜೆಇಇ ಅಕಾಂಕ್ಷಿಗಳಿಗೆ ಇದು ಆಶಾದಾಯಕ ಬೆಳವಣಿಗೆಯಾಗಿದ್ದು, SRS ಸರ್ವರೀತಿಯಲ್ಲಿ ಗುಣಾತ್ಮಕ ತರಬೇತಿಗೆ ತಯಾರಾಗಿರುವುದು ವಿಶೇಷ.  ಇದೇ ಸಂದರ್ಭದಲ್ಲಿ 2022-23ನೇ ಸಾಲಿನ ಫಲಿತಾಂಶವು ಅತ್ಯುತ್ತಮವಾಗಿದ್ದು SRS ಪಿಯು ಕಾಲೇಜಿನ ಒಟ್ಟು 8 ಜನ ವಿದ್ಯಾರ್ಥಿಗಳು IIT, IIIT, ಮತ್ತು NIT ಗಳಿಗೆ ಹಾಗೂ ಪ್ರತಿಷ್ಟಿತ AIIMS ಗೆ ಇಬ್ಬರೂ JIPMER ಗೆ ಒಬ್ಬ ವಿದ್ಯಾರ್ಥಿ ಮೆಡಿಕಲ್‌ಗೆ ಆಯ್ಕೆಯಾದುದ್ದನ್ನು ಸ್ಮರಿಸಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. 

ಈ ಬಾರಿಯ ಫಲಿತಾಂಶ ಕಳೆದ ಬಾರಿಯ ಫಲಿತಾಂಶಕ್ಕಿಂತಲೂ ಅತ್ಯುತ್ತುಮವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು IIT ಗಳಿಗೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ವರ್ಷದಿಂದ ವರ್ಷಕ್ಕೆ ತರಬೇತಿಯ ಗುಣಮಟ್ಟ ಉತ್ತಮಗೊಳಿಸಿಕೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಬಯಲು ಸೀಮೆ ಚಿತ್ರದುರ್ಗದಂತಹ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಮಗೂ ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಛೇರ್ಮನ್‌ ಬಿ ಎ ಲಿಂಗಾರೆಡ್ಡಿಯವರು ತಿಳಿಸಿದರು.   

ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್‌ ಅಮೋಘ್‌, ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್‌, ಪ್ರಾಂಶುಪಾಲರಾದ ಶ್ರೀ ಗಂಗಾಧರ್‌ ಈ. ಉಪಪ್ರಾಂಶುಪಾಲರಾದ ಶ್ರೀ ಮನೋಹರ ಬಿ ಹಾಗೂ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Related Post

Leave a Reply

Your email address will not be published. Required fields are marked *