Breaking
Wed. Dec 25th, 2024

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸ್ಯಾಂಡಲ್‌ವುಡ್ ನಟರು  ವೋಟ್…!

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸ್ಯಾಂಡಲ್‌ವುಡ್ ನಟರು  ವೋಟ್ ಮಾಡಿದ್ದಾರೆ. ಒಂದೊಂದು ಮತ ಕೂಡ ಅದೆಷ್ಟು ಮುಖ್ಯ ಎಂಬುದನ್ನು ಕಲಾವಿದರು ತಿಳಿಸಿದ್ದಾರೆ. ಹಾಗಾದ್ರೆ ಯಾರು ಎಲ್ಲಿ ವೋಟ್ ಮಾಡಿದ್ದಾರೆ ಇಲ್ಲಿದೆ ಮಾಹಿತಿ.

ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆ ಬಿಟಿಎಲ್ ವಿದ್ಯಾವಾಹಿನಿ ಶಾಲೆಯಲ್ಲಿ ವೋಟ್ ಮಾಡಿದ್ದಾರೆ. ಮತ ಹಾಕಿದರೆ ತುಂಬಾ ಒಳ್ಳೆಯದು. ಯಾಕೆಂದರೆ ನಾವು ರಾಜರ ರೀತಿ ಫೀಲ್ ಮಾಡುವ ದಿನವಿದು. ಈ ಒಂದು ದಿನ ಆಲಸ್ಯ ಬೇಡ ಎಂದು ಉಪೇಂದ್ರ ಯೂತ್ಸ್‌ಗೆ ಮನವಿ ಮಾಡಿದ್ದಾರೆ. 

ನವರಸ ನಾಯಕ ಜಗ್ಗೇಶ್ ತಮ್ಮ ಕುಟುಂಬದ ಜೊತೆ ಮಲ್ಲೇಶ್ವರಂನಲ್ಲಿ ಮತದಾನ ಮಾಡಿದ್ದಾರೆ. ಜಗ್ಗೇಶ್ ವೋಟ್ ಮಾಡಿದ ಬಳಿಕ ಮತದಾನ ಶ್ರೇಷ್ಠದಾನ ಎಂದು ಮಾತನಾಡಿದ್ದಾರೆ. 

ನಟ ವಸಿಷ್ಠ ಸಿಂಹ ಕನ್ನಡ ಮತ್ತು ಪರಭಾಷಾ ಸಿನಿಮಾಗಳ ಶೂಟಿಂಗ್ ಬಿಡುವು ಮಾಡಿಕೊಂಡು ಚಿಕ್ಕಲಸಂದ್ರ ಬೆನಕ ಸ್ಕೂಲ್‌ನಲ್ಲಿ ಮತದಾನ ಮಾಡಿದ್ದಾರೆ. 

ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಜೊತೆ ಜೆಪಿ ನಗರದಲ್ಲಿ ಮತದಾನ ಮಾಡಿದ ಬಳಿಕ ತಪ್ಪದೇ ವೋಟ್ ಮಾಡಬೇಕು ಎಂದಿದ್ದಾರೆ. 

ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆಗೆ ಆಗಮಿಸಿ ತ್ಯಾಗರಾಜನಗರದಲ್ಲಿ ಮತದಾನ ಮಾಡಿದ್ದಾರೆ. ಮುಂದೆ ಯಾರ ಸರ್ಕಾರ ಬರುತ್ತದೆ ಎಂದು ನೋಡೋಣ. ನನ್ನ ಕನಸಿನ ಭಾರತ ಹೇಗಿರಬೇಕು ಎಂದು ಹೇಳಿದರೆ ಕಾಂಟ್ರವರ್ಸಿ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡೋದು ಬೇಡ. ಜೈ ಶ್ರೀರಾಮ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ. 

ರಮೇಶ್ ಅರವಿಂದ್ ಪದ್ಮನಾಭನಗರದಲ್ಲಿ ಮತದಾನ ಮಾಡಿದ ಬಳಿಕ ಗೆಲುವು- ಸೋಲು ಸೆಕೆಂಡರಿ, ಇದು ಸಾಮಾಜಿಕ ಜವಾಬ್ದಾರಿ. ಒಂದು ಕುಟುಂಬ ವೋಟ್ ಮಾಡದಿದ್ರೆ ತುಂಬಾ ವ್ಯತ್ಯಾಸವಾಗುತ್ತದೆ ಎಂದಿದ್ದಾರೆ. 

ಬಿಗ್ ಬಾಸ್ ಕನ್ನಡ 10’ರ ವಿನ್ನರ್ ಕಾರ್ತಿಕ್ ಮಹೇಶ್  ಮೈಸೂರಿನ ಶಾರದದೇವಿ ನಗರದ ಶಾಲೆಯೊಂದರಲ್ಲಿ ಮತದಾನ ಮಾಡಿದ್ದಾರೆ. 

ಸ್ಯಾಂಡಲ್‌ವುಡ್ ನಟ ಶರಣ್ ತಮ್ಮ ಪತ್ನಿ ಜೊತೆ ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ.

 

 

 

 

Related Post

Leave a Reply

Your email address will not be published. Required fields are marked *