ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರ ಪತ್ನಿ ಪಂಖುರಿ ಶರ್ಮಾ ಅವರಿಂದ ತಮ್ಮ 2ನೇ ಮಗುವಿಗೆ ಜನ್ಮನೀಡಿದ್ದಾರೆ. ಶುಭ ಶುಕ್ರವಾರವೇ ಗಂಡು ಮಗುವಿನ ಜನನವಾಗಿದ್ದು ದಂಪತಿಗಳಿಬ್ಬರು ಸಂಭ್ರಮದಲ್ಲಿದ್ದಾರೆ.
ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ವಾಯು ಎಂದು ಸಹ ಪಾಂಡ್ಯ ಹೇಳಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ. 2022ರ ಜುಲೈನಲ್ಲಿ ಕೃನಾಲ್ ಮತ್ತು ಪಂಖುರಿ (ಪಂಕುರಿ ಶರ್ಮಾ) ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ಕವಿರ್.
2017ರಲ್ಲಿ ಕೃನಾಲ್ ಪಾಂಡ್ಯ ಅವರು ತಮ್ಮ ಬಹುಕಾಲದ ಗೆಳತಿ ಪಂಖುರಿ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಮಾಡೆಲ್ ಆಗಿದ್ದ ಪಂಖರಿ, ತನಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಕೃನಾಲ್’ ಎಂದು ಹೇಳಲಾಗಿದೆ.
ಸದ್ಯ ಐಪಿಎಲ್ ಕಣದಲ್ಲಿರುವ ಕೃನಾಲ್ ಪಾಂಡ್ಯ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ