Breaking
Tue. Dec 24th, 2024

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.73.30 ರಷ್ಟು ಮತದಾನ…!

ಚಿತ್ರದುರ್ಗ. ಏ.27: ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಏ.26ರಂದು ಶುಕ್ರವಾರ ಜರುಗಿದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.73.30 ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 18,56,876 ಮತದಾರರಲ್ಲಿ 13,61,031 ಮತದಾರರು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. 

ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಚಲಾವಣೆಯಾಗಿದೆ. ಶೇ.75.75 ರಷ್ಟು ಮತದಾನವಾಗಿದೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 125730 ಪುರುಷ, 124968 ಮಹಿಳೆ, 13 ಇತರೆ ಮತದಾರರು ಸೇರಿ ಒಟ್ಟು 250711 ಮತದಾರರು ಇದ್ದಾರೆ. ಇದರಲ್ಲಿ 96329 ಪುರುಷ, 93569 ಮಹಿಳೆ, 7 ಇತರೆ ಮತದಾರರು ಸೇರಿ 189905 ಮತದಾರರು ಮತ ಚಲಾಯಿಸಿದ್ದಾರೆ. 

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.72.72 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 111280 ಪುರುಷ, 113160 ಮಹಿಳೆ ಹಾಗೂ 7 ಇತರೆ ಸೇರಿ ಒಟ್ಟು 224447 ಮತದಾರರು ಇದ್ದಾರೆ. ಇದರಲ್ಲಿ 81990 ಪುರುಷ, 81225 ಮಹಿಳೆ ಹಾಗೂ 1 ಇತರೆ ಸೇರಿ 163216 ಮತದಾರರು ಮತಚಲಾಯಿಸಿದ್ದಾರೆ. 

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.69 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 131358 ಪುರುಷ, 136415 ಮಹಿಳೆ ಹಾಗೂ 41 ಇತರೆ ಸೇರಿ ಒಟ್ಟು 267814 ಮತದಾರರು ಇದ್ದಾರೆ. ಇದರಲ್ಲಿ 94999 ಪುರುಷ, 94302 ಮಹಿಳೆ ಹಾಗೂ 20 ಇತರೆ ಸೇರಿ ಒಟ್ಟು 189321 ಮತದಾರರು ಮತಚಲಾಯಿಸಿದ್ದಾರೆ. 

ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.71.53 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 122532 ಪುರುಷ, 125406 ಮಹಿಳೆ ಹಾಗೂ 16 ಇತರೆ ಸೇರಿ ಒಟ್ಟು 247954 ಮತದಾರರು ಇದ್ದಾರೆ. ಇದರಲ್ಲಿ 88988 ಪುರುಷ, 88354 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 177350 ಮತದಾರರು ಮತಚಲಾಯಿಸಿದ್ದಾರೆ. 

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.45 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 118806 ಪುರುಷ, 119554 ಮಹಿಳೆ ಹಾಗೂ 10 ಇತರೆ ಸೇರಿ ಒಟ್ಟು 238370 ಮತದಾರರು ಇದ್ದಾರೆ. ಇದರಲ್ಲಿ 92421 ಪುರುಷ, 87421 ಮಹಿಳೆ ಹಾಗೂ 2 ಇತರೆ ಮತದಾರರು ಸೇರಿ ಒಟ್ಟು 179844 ಮತದಾರರು ಮತಚಲಾಯಿಸಿದ್ದಾರೆ. 

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.74 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 100439 ಪುರುಷ, 100418 ಮಹಿಳೆ ಸೇರಿ ಒಟ್ಟು 200857 ಮತದಾರರು ಇದ್ದಾರೆ. ಇದರಲ್ಲಿ 75388 ಪುರುಷ, 73256 ಮಹಿಳೆ ಮತದಾರರು ಸೇರಿ ಒಟ್ಟು 148644 ಮತದಾರರು ಮತಚಲಾಯಿಸಿದ್ದಾರೆ. 

ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.52 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 100873 ಪುರುಷ, 97358 ಮಹಿಳೆ ಹಾಗೂ 9 ಇತರೆ ಸೇರಿ ಒಟ್ಟು 198240 ಮತದಾರರು ಇದ್ದಾರೆ. ಇದರಲ್ಲಿ 70997 ಪುರುಷ, 68801 ಮಹಿಳಾ ಮತದಾರರು ಸೇರಿ ಒಟ್ಟು 139798 ಮತದಾರರು ಮತಚಲಾಯಿಸಿದ್ದಾರೆ.

  ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.70 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 114525 ಪುರುಷ, 113950 ಮಹಿಳೆ ಹಾಗೂ 8 ಇತರೆ ಸೇರಿ ಒಟ್ಟು 228483 ಮತದಾರರು ಇದ್ದಾರೆ. ಇದರಲ್ಲಿ 87384 ಪುರುಷ, 85568 ಮಹಿಳೆ ಹಾಗೂ 1 ಇತರೆ ಮತದಾರರು ಸೇರಿ ಒಟ್ಟು 172953 ಮತದಾರರು ಮತಚಲಾಯಿಸಿದ್ದಾರೆ. 

ಜೂನ್ 04ರಂದು ಮತ ಎಣಿಕೆ: ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ‌ ಕಾಲೇಜಿನ ಹೊಸ ಕಟ್ಟಡದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಭದ್ರ ಪಡಿಸಲಾಗಿದ್ದು, ಜೂನ್ 04 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 

Related Post

Leave a Reply

Your email address will not be published. Required fields are marked *