Breaking
Wed. Dec 25th, 2024

ಮಾನವ ಕಳ್ಳ ಸಾಗಣಿಕೆ ಮಾಡುತ್ತಿದ್ದ 95  ಮಕ್ಕಳನ್ನು ಅಯೋಧ್ಯೆಯಲ್ಲಿ ; ಮಕ್ಕಳ ಆಯೋಗದ  ಅಧಿಕಾರಿಗಳು ರಕ್ಷಣೆ…!

ಬಿಹಾರದಿಂದ  ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 95  ಮಕ್ಕಳನ್ನು ಅಯೋಧ್ಯೆಯಲ್ಲಿ  ಮಕ್ಕಳ ಆಯೋಗದ  ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಪ್ರಕರಣ ಮಕ್ಕಳ ಕಳ್ಳಸಾಗಣೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು.

ಈ ಬಗ್ಗೆ ಮಾಹಿತಿ ನೀಡಿದ ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, ಯುಪಿ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರಿಂದ ಮಾಹಿತಿ ಪಡೆದ ಸಿಡಬ್ಲ್ಯೂಸಿ ಸದಸ್ಯರು ಮಕ್ಕಳನ್ನು ರಕ್ಷಿಸಿದ್ದಾರೆ. ಸುಚಿತ್ರಾ ಚತುರ್ವೇದಿಯವರು ಕರೆ ಮಾಡಿ, ಬಿಹಾರದಿಂದ ಅಪ್ರಾಪ್ತರನ್ನು ಅಕ್ರಮವಾಗಿ ಸಹರಾನ್‌ಪುರಕ್ಕೆ ಸಾಗಿಸುತ್ತಿದ್ದಾರೆ. ಅವರು ಗೋರಖ್‌ಪುರದಲ್ಲಿದ್ದಾರೆ  ಮತ್ತು ಅಯೋಧ್ಯೆಯ ಮೂಲಕ ಹೋಗುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ಬಂದ ತಕ್ಷಣ ಅವರನ್ನು ರಕ್ಷಿಸಲಾಗಿದೆ.   

ಮಕ್ಕಳನ್ನು ಕರೆತಂದವರಿಗೆ ಪೋಷಕರಿಂದ ಯಾವುದೇ ಒಪ್ಪಿಗೆ ಪತ್ರವಿಲ್ಲ. ಮಕ್ಕಳನ್ನು ಎಲ್ಲಿಗೆ ತೋರಿಸುತ್ತಿದ್ದಾರೆಂದು ತಿಳಿದಿಲ್ಲ. ಮಕ್ಕಳ ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರಾಗಿದ್ದಾರೆ. ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಿದ ಅಧಿಕಾರಿಗಳು.  

Related Post

Leave a Reply

Your email address will not be published. Required fields are marked *