ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ 22-ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಶೇ. 76.72 ರಷ್ಟು ಮತದಾನವಾಗಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8,78,702 ಪುರುಷರು, 8,99,501 ಮಹಿಳೆಯರು, 107 ಇತರರು ಸೇರಿದಂತೆ ಒಟ್ಟು 17,78,310 ಮತದಾರರಿದ್ದಾರೆ. ಈ ಪೈಕಿ 6,81,965 ಪುರುಷರು, 6,82,341 ಮಹಿಳೆಯರು, 32 ಇತರೆ ಮಂದಿ ಸೇರಿದಂತೆ ಒಟ್ಟು 13,64,338 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 1,14,041 ಪುರುಷರು, 1,14,560 ಮಹಿಳೆಯರು, 12 ಇತರರು ಸೇರಿದಂತೆ ಒಟ್ಟು 2,28,613 ಮತದಾರರಿದ್ದಾರೆ. ಇವರಲ್ಲಿ 88,112 ಪುರುಷರು, 87,754 ಮಹಿಳೆಯರು, 7 ಮಂದಿ ಇತರರು ಸೇರಿದಂತೆ ಒಟ್ಟು 1,75,873 ಮತದಾರರು ಮತದಾನ ಮಾಡಿದ್ದಾರೆ.
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 1,10,369 ಪುರುಷರು, 1,12,381 ಮಹಿಳೆಯರು, 7 ಇತರರು ಸೇರಿದಂತೆ ಒಟ್ಟು 2,22,757 ಮತದಾರರಿದ್ದಾರೆ. ಈ ಪೈಕಿ 86,202 ಪುರುಷರು, 85,074 ಮಹಿಳೆಯರು, 3 ಮಂದಿ ಇತರರು ಸೇರಿದಂತೆ ಒಟ್ಟು 1,71,279 ಮತದಾರರು ಮತ ಚಲಾಯಿಸಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ 1,19,545 ಪುರುಷರು, 1,21,391 ಮಹಿಳೆಯರು, 13 ಇತರರು ಸೇರಿದಂತೆ ಒಟ್ಟು 2,40,949 ಮತದಾರರಿದ್ದಾರೆ. ಇವರಲ್ಲಿ 95,139 ಪುರುಷರು, 93,639 ಮಹಿಳೆಯರು, 8 ಇತರರು ಸೇರಿದಂತೆ ಒಟ್ಟು 1,88,786 ಮತದಾರರು ಮತ ಚಲಾಯಿಸಿದ್ದಾರೆ.
ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 1,03,121 ಪುರುಷರು, 1,06,413 ಮಹಿಳೆಯರು, 13 ಇತರರು ಸೇರಿದಂತೆ ಒಟ್ಟು 2,09,547 ಮತದಾರರಿದ್ದಾರೆ. ಇವರಲ್ಲಿ 77,585 ಪುರುಷರು, 77,864 ಮಹಿಳೆಯರು, 2 ಇತರರು ಸೇರಿದಂತೆ ಒಟ್ಟು 1,55,451 ಮತದಾರರು ಮತ ಚಲಾಯಿಸಿದ್ದಾರೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,12,880 ಪುರುಷರು, 1,11,793 ಮಹಿಳೆಯರು, 10 ಇತರರು ಸೇರಿದಂತೆ ಒಟ್ಟು 2,24,683 ಮತದಾರರಿದ್ದಾರೆ. ಇವರಲ್ಲಿ 81,056 ಪುರುಷರು, 80699 ಮಹಿಳೆಯರು, 2 ಇತರರು ಸೇರಿದಂತೆ ಒಟ್ಟು 1,61,757 ಮತದಾರರು ಮತ ಚಲಾಯಿಸಿದ್ದಾರೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,08,056 ಪುರುಷರು, 1,11,988 ಮಹಿಳೆಯರು, 21 ಇತರರು ಸೇರಿದಂತೆ ಒಟ್ಟು 2,20,065 ಮತದಾರರಿದ್ದಾರೆ. ಇವರಲ್ಲಿ 81,489 ಪುರುಷರು, 82,292 ಮಹಿಳೆಯರು, 8 ಇತರರು ಸೇರಿದಂತೆ ಒಟ್ಟು 1,63,789 ಮತದಾರರು ಮತ ಚಲಾಯಿಸಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 1,04,903 ಪುರುಷರು, 1,10,517 ಮಹಿಳೆಯರು, 15 ಇತರರು ಸೇರಿದಂತೆ ಒಟ್ಟು 2,15,435 ಮತದಾರರಿದ್ದಾರೆ. ಇವರಲ್ಲಿ 84,021 ಪುರುಷರು, 85,399 ಮಹಿಳೆಯರು, 0 ಇತರರು ಸೇರಿದಂತೆ ಒಟ್ಟು 1,69,420 ಮತದಾರರು ಮತ ಚಲಾಯಿಸಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,05,787 ಪುರುಷರು, 1,10,458 ಮಹಿಳೆಯರು, 16 ಇತರರು ಸೇರಿದಂತೆ ಒಟ್ಟು 2,16,261 ಮತದಾರರಿದ್ದಾರೆ. ಇವರಲ್ಲಿ 88,361 ಪುರುಷರು, 89,620 ಮಹಿಳೆಯರು, 2 ಇತರರು ಸೇರಿದಂತೆ ಒಟ್ಟು 1,77,983 ಮತದಾರರು ಮತ ಚಲಾಯಿಸಿದ್ದಾರೆ.