ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಮತದಾನ ಪ್ರಮಾಣದ ಪರಿಷ್ಕೃತ ವರದಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ರಾಜ್ಯದಲ್ಲಿ 69.56% ಮತದಾನ ನಡೆದಿದೆ.
ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಆಗಿದೆ. ಬೆಂಗಳೂರಿನಲ್ಲಿ ಕಳೆದ ಬಾರಿಯಂತೆಯೇ (2019) ಮತದಾನಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಹೊರತುಪಡಿಸಿದರೆ, ಉಳಿದ ಮೂರು ಕ್ಷೇತ್ರಗಳಲ್ಲೂ ವೋಟಿಂಗ್ ಪ್ರಮಾಣ 60% ದಾಟಿಲ್ಲ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಉಡುಪಿ-ಚಿಕ್ಕಮಗಳೂರು 77.15%, ಹಾಸನ 77.68%, ದಕ್ಷಿಣ ಕನ್ನಡ 77.56%, ಚಿತ್ರದುರ್ಗ 73.30%, ತುಮಕೂರು 78.05%, ಮಂಡ್ಯ 81.67%, ಮೈಸೂರು 70.62%, ಚಾಮರಾಜನಗರ 76.81% ಮತದಾನ ನಡೆದಿದೆ.
ಬೆಂಗಳೂರು ಗ್ರಾಮಾಂತರ 68.30%, ಬೆಂಗಳೂರು ಉತ್ತರ 54.45%, ಬೆಂಗಳೂರು ಕೇಂದ್ರ 54.06%, ಬೆಂಗಳೂರು ದಕ್ಷಿಣ 53.17%, ಚಿಕ್ಕಬಳ್ಳಾಪುರ 77.00%, ಕೋಲಾರ 78.27% ಮತ ಚಲಾವಣೆಯಾಗಿದೆ.