Breaking
Wed. Dec 25th, 2024

ಸುಮ್ಮನಹಳ್ಳಿ  ಬ್ರಿಡ್ಜ್ ಬಳಿಯ ಶ್ರೀಗಂಧಕಾವಲ್‍ನ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ…!

ಬೆಂಗಳೂರು: ನಗರದ ಸುಮ್ಮನಹಳ್ಳಿ ಬ್ರಿಡ್ಜ್ ಬಳಿಯ ಶ್ರೀಗಂಧಕಾವಲ್‌ನ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮರಗಳು ಹೊತ್ತಿ ಉರಿದಿವೆ.

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 3 ರಹಸ್ಯ ಅರಣ್ಯ ಪ್ರದೇಶದಲ್ಲಿ ಅರ್ಧ ಭಾಗಕ್ಕೆ ಬೆಂಕಿ ಆವರಿಸಿದೆ. ತೀವ್ರತರವಾದ ಪರಿಣಾಮ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸಿದೆ. ಒಣ ಕಸಕ್ಕೆ ಹಾಕಿದ ಬೆಂಕಿ ಅರಣ್ಯ ಪ್ರದೇಶಕ್ಕೆ ಹಬ್ಬಿದೆ ಎಂದು ಶಂಕಿಸಲಾಗಿದೆ. ಗುರುವಾರ ರಾತ್ರಿಯೇ ಅರಣ್ಯ ಪ್ರದೇಶಕ್ಕೆ ಬೆಂಕಿ ತಾಗಿದೆ ಎಂದು ತಿಳಿದು ಬಂದಿದೆ. 

ನಮೂದಿಸಿದ ಮರಗಳನ್ನು ಇಲ್ಲಿ ತಂದು ಡಂಪ್ ಮಾಡಬಹುದಾಗಿದೆ. ಅದೇ ರೀತಿ ಹೊರಗೆ ಮಾರಾಟ ಮಾಡುವ ಕಟ್ಟಿಗೆಗಳನ್ನು ಇಲ್ಲಿ ತಂದು ಹಾಕಿ ಹರಾಜು ಮಾಡಲಾಗ್ತಿತ್ತು. ಹರಾಜಾಗದೇ ಉಳಿದಿದ್ದ ಕಟ್ಟಿಗೆಗಳೆಲ್ಲ ಅರಣ್ಯ ರಾಶಿ ಬಿದ್ದಿದ್ದವು. ತೀವ್ರ ಬಿಸಿಲಿನ ಕಾರಣ ಸಂಪೂರ್ಣ ಒಣಗಿಸಿದ ಮರದ ತುಂಡುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆಯೂ ಇದೆ ಎಂಬುದಾಗಿಯೂ ಅಧಿಕೃತವಾಗಿದೆ. 

ಸತತ 9 ಗಂಟೆಗಳಿಂದ ನಿರಂತರ ಕಾರ್ಯಾಚರಣೆ ನಡೆಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೆÇಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.

Related Post

Leave a Reply

Your email address will not be published. Required fields are marked *