Breaking
Tue. Dec 24th, 2024

ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಮೋದಿ ಮತ್ತು ಪ್ರಿಯಾಂಕಾ ಭರ್ಜರಿ ಪ್ರಚಾರ…!

ಬಾಗಲಕೋಟೆ, ಏಪ್ರಿಲ್ 27: ಜಿಲ್ಲೆಯಲ್ಲಿ ಲೋಕಸಭೆ ರಣಕಣ ರಂಗೇರಿದೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಎಲ್ಲ ಕಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 29ರ ಮಧ್ಯಾಹ್ನ 12.05ಕ್ಕೆ ಬಾಗಲಕೋಟೆಗೆ ಆಗಮಿಸಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಜಿಲ್ಲೆಯ ಜಮಖಂಡಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಒಂದೇ ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಮೋದಿ ಮತ್ತು ಪ್ರಿಯಾಂಕಾ ಭರ್ಜರಿ ಪ್ರಚಾರ ಮಾಡಲಿದ್ದಾರೆ. 

ಪ್ರಿಯಾಂಕಾ ಗಾಂಧಿ ಬಾಗಲಕೋಟೆ ಭೇಟಿ ವಿವರ : ಏಪ್ರಿಲ್ 29ರಂದು ಬೆಳಗ್ಗೆ 11.20ಕ್ಕೆ ಬೆಳಗಾವಿಗೆ ಆಗಮಿಸುವ ಪ್ರಿಯಾಂಕಾ ಗಾಂಧಿ ಬೆಳಗಾವಿಯಿಂದ ಜಮಖಂಡಿಗೆ ಹೆಲಿಕಾಪ್ಟರ್ನಲ್ಲಿ ತೆರಳಲಿದ್ದಾರೆ. ಏ.29ರಂದು ಮಧ್ಯಾಹ್ನ 12 ಗಂಟೆಗೆ ಜಮಖಂಡಿಗೆ ಆಗಮಿಸಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ಜಮಖಂಡಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಳಗಾವಿ ಮಾರ್ಗವಾಗಿ ಕಲಬುರಗಿ ಕಡೆ ಪ್ರಯಾಣ ಬೆಳೆಸಲಿದ್ದಾರೆ.

ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಪ್ರಚಾರ  : ಇನ್ನು ಪ್ರಧಾನಿ ಮೋದಿ ಕೂಡ ಜಿಲ್ಲೆಗೆ ಲಗ್ಗೆಯಿಡುತ್ತಿದ್ದು, ಕೇಸರಿ ಕಲಿಗಳಿಗೆ ಮತ್ತಷ್ಟು ಹುರುಪು ಬಂದಿದೆ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ, ವಿಜಯಪುರ ಅಭ್ಯರ್ಥಿ ರಮೇಶ್ ಜಿಗಜಿಣಗಿ ಪರ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ. ಮೋದಿ ಆಗಮನದಿಂದ‌ ಅಭ್ಯರ್ಥಿಗಳಿಗೆ ಬೂಸ್ಟ್ ಸಿಕ್ಕಂತಾಗಿದೆ. 

ಮೋದಿ ಬರೋದರಿಂದ‌ ಬಿಜೆಪಿ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ಬರಲಿದ್ದು ಇದು ಬಾಗಲಕೋಟೆ, ವಿಜಯಪುರ ಅಭ್ಯರ್ಥಿಗಳಿಗೆ ಬಾರಿ ಪ್ಲಸ್ ಆಗಲಿದೆ. ಮೋದಿ ಆಗಮನದಿಂದ ಮತ್ತಷ್ಟು ಹೆಚ್ಚು ಮತಗಳ ಅಂತರದಿಂದ ವಿಜೆಪಿ ಅಭ್ಯರ್ಥಿಗಳು ಗೆಲ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ ಬಿಜೆಪಿ ಮುಖಂಡರಿದ್ದಾರೆ.

ಮೋದಿ ಪ್ರಚಾರ ಸಮಾವೇಶಕ್ಕೆ ಈಗಾಗಲೇ ಭರದ ಸಿದ್ಧತೆ ಶುರುವಾಗಿದೆ. ಸಮಾವೇಶಕ್ಕಾಗಿ ನೂರು‌ ಎಕರೆ ಜಾಗದಲ್ಲಿ ಸಿದ್ಧತೆ ‌ನಡೆದಿದೆ. ಬಾಗಲಕೋಟೆಯ ನವನಗರದ ಸೆಕ್ಟರ್ ನಂ 110, 111, 112, 113 ವ್ಯಾಪ್ತಿ ಪ್ರದೇಶದ ನೂರು ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ಮೈದಾನದಲ್ಲಿ ಇಂದು ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದ್ದಾರೆ. ಗೋಪೂಜೆ ಹಾಗೂ ಭೂಮಿ ಪೂಜೆ ‌ಮಾಡಿ ಕಾರ್ಯಕ್ರಮದ ವೇದಿಕೆ ಸಿದ್ದತೆ ‌ಕಾರ್ಯ ಶುರು ಮಾಡಿದ್ದಾರೆ. 

ಉತ್ತರಕ್ಕೆ‌ ಮುಖ ‌ಮಾಡಿ 6/40 ಅಡಿ ವೇದಿಕೆ ಇರಲಿದೆ. ವೇದಿಕೆ‌ ಮುಂದೆ 40 ಅಡಿ‌ ಡಿ‌ಜೋನ್ ಇರಲಿದೆ. ಮುಂದೆ 300/600 ಅಡಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಖುರ್ಚಿ ಹಾಗೂ ಪೆಂಡಾಲ್ ವ್ಯವಸ್ಥೆ ಇರಲಿದೆ. ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳಿಂದ ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ವೇದಿಕೆಯಲ್ಲಿ ಕೇಂದ್ರ ಸರಕಾರದ ಯೋಜನೆ ಸದುಪಯೋಗ ಪಡೆದುಕೊಂಡ ಐದು ಜನ ಫಲಾನುಭವಿಗಳಿಂದ ಮೋದಿಗೆ ಸನ್ಮಾನ ನಡೆಯಲಿದೆ. ಎಲ್ಇಡಿ ಮೂಲಕ ಮೋದಿ ಗ್ಯಾರಂಟಿಗಳು, ಕೇಂದ್ರದ ಯೋಜನೆಗಳ‌ ಪ್ರದರ್ಶನ ನಡೆಯಲಿದೆ. ವೇದಿಕೆಯ ಬಲಭಾಗದಲ್ಲಿ ಹೆಲಿಪ್ಯಾಡ್ ಸಿದ್ದ ಮಾಡಲಾಗುತ್ತದೆ.

Related Post

Leave a Reply

Your email address will not be published. Required fields are marked *