ಸಾಮಾನ್ಯವಾಗಿ ಬಾಳೆ ಹೂಗಳನ್ನು ಬಳಕೆ ಮಾಡೋದು ಕಡಿಮೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಇಂದು ಅನೇಕರು ತೂಕ ಹೆಚ್ಚಳದಂತಹ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದರೆ ಇಂತಹ ಸಮಸ್ಯೆಗಳಿಗೆ ಬಾಳೆ ಹೂವು ಪರಿಣಾಮಕಾರಿ. ಸಂಶೋಧನೆಯ ಪ್ರಕಾರ, ಇದರಲ್ಲಿರುವ ಫೈಬರ್ ತೂಕವನ್ನು ಕಳೆದುಕೊಳ್ಳಲು ಮತ್ತು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ. ಇದರಿಂದ ಕೊಬ್ಬು ಕೂಡ ಕಡಿಮೆಯಾಗುತ್ತದೆ.
ಬಾಳೆ ಹೂವುಗಳು ಮೆಗ್ನೀಸಿಯಮ್, ಆಂಟಿ-ಆಕ್ಸಿಡೆಂಟ್ ಮತ್ತು ಖಿನ್ನತೆ-ಶಮನಕಾರಿ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಒತ್ತಡ ಮತ್ತು ಮನಸ್ಥಿತಿಯನ್ನು ಉತ್ತಮ ಸ್ಥಿತಿಯಲ್ಲಿಡಲು ತುಂಬಾ ಒಳ್ಳೆಯದು. ಅತಿಯಾದ ಕೆಲಸ ಮತ್ತು ಕೆಲಸದ ಹೊರೆಯಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದರೆ, ಬಾಳೆಹೂವನ್ನು ಸೇವಿಸಬಹುದು.
ಬಾಳೆಹೂವು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರವಾಗಿದ್ದು, ಇದರ ಸೇವನೆಯಿಂದ ಮಧುಮೇಹದ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಬಾಳೆಹೂವನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಲು ಮತ್ತು ಗುಣಪಡಿಸಲು ಸಾಧ್ಯವಿದೆ.
ಬಾಳೆ ಹೂಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿ ದೊರೆಯುತ್ತದೆ. ಇದು ಹಿಮೋಗ್ಲೋಬಿನ್ ಕೊರತೆಯನ್ನು ಪೂರೈಸುತ್ತದೆ. ಇದರೊಂದಿಗೆ ದೇಹದಲ್ಲಿನ ರಕ್ತಹೀನತೆಯನ್ನೂ ಹೋಗಲಾಡಿಸಬಹುದು. ಇದಲ್ಲದೆ, ಬಾಳೆ ಹೂವುಗಳಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ತಾಮ್ರ, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಕೂಡ ಇದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಆವಿಷ್ಕಾರ್ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)