ತೆಲುಗಿನ ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿ ಲವ್ ಸ್ಟೋರಿ ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ. ‘ತಾಂಡೇಲ್’ ಚಿತ್ರದ ಮೂಲಕ ಮತ್ತೆ ಹೊಸ ಪ್ರೇಮ ಕಹಾನಿ ಹೇಳಲು ರೆಡಿಯಾಗಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರೀ ಮೊತ್ತಕ್ಕೆ ಒಟಿಟಿಗೆ ಸೇಲ್ ಆಗಿದೆ.
ನಾಗಚೈತನ್ಯ ಕೆರಿಯರ್‌ನಲ್ಲಿ ಮೊದಲ ಬಾರಿಗೆ ದುಬಾರಿ ಮೊತ್ತಕ್ಕೆ ಸಿನಿಮಾ ಒಟಿಟಿಗೆ ಮಾರಾಟವಾಗಿದೆ. ಬಹುಭಾಷೆಗಳಲ್ಲಿ ‘ತಾಂಡೇಲ್’ ಚಿತ್ರದ ಒಟಿಟಿ ರೈಟ್ಸ್ ಅನ್ನು ಖರೀದಿಸಿದೆ. 40 ಕೋಟಿ ರೂ.ಗೆ ಸಿನಿಮಾವನ್ನು ಖರೀದಿ ಮಾಡಲಾಗಿದೆ. ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ನಿರ್ದೇಶಕ ಚಂದು ಮಾಂಡೇಟಿ ನಿರ್ದೇಶನದ ‘ತಾಂಡೇಲ್’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೇ ಡಿಸೆಂಬರ್‌ನಲ್ಲಿ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.
ತಾಂಡೇಲ್’ ಸಿನಿಮಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾವಾಗಿದ್ದು, ವಿಭಿನ್ನ ಕಥೆ ಮೂಲಕ ನಾಗಚೈತನ್ಯ, ಸಾಯಿ ಪಲ್ಲವಿ ಬರುತ್ತಿದ್ದಾರೆ. ಬನ್ನಿ ವಾಸು ನಿರ್ಮಾಣ ಮಾಡಿದ್ದಾರೆ.