Breaking
Mon. Dec 23rd, 2024

ಕಾಂಗ್ರೆಸ್ ಕರ್ನಾಟಕವನ್ನು ಲೂಟಿಯ ಎಟಿಎಂ ಆಗಿದೆ ಎಂದು ಮೋದಿ ವಾಗ್ದಾಳಿ….!

ಬಾಗಲಕೋಟೆ  : ಭಾರತ ವಿಶ್ವದ ಟಾಪ್ 3ನೇ ಸ್ಥಾನಕ್ಕೆ ಏರಲಿದ್ದು, ಅದನ್ನು ನಿಮ್ಮ ಮತ ಮಾಡಲಿದೆ. ಈ ಬಾರಿಯ ಲೋಕಸಭಾ ಚುನಾವಣೆ ಆತ್ಮನಿರ್ಭರದ್ದಾಗಿದ್ದು, ಭಾರತದ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ  ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತವನ್ನು ವಿಶ್ವದ ಟಾಪ್ 3 ಸ್ಥಾನಕ್ಕೆ ಮೋಜು, ಮಸ್ತಿಯಲ್ಲಿ ಕಾಲ ಕಳೆಯುವವರು ಏರಿಸುವುದಿಲ್ಲ. ಒಂದು ಸಂಕಲ್ಪ ಮಾಡಿಕೊಂಡು 24*7 ಕೆಲಸ ಮಾಡಿದರೆ ಇದು ಸಾಧ್ಯವಾಗಲಿದೆ. ಈ ವಿಚಾರದಲ್ಲಿ ಮೋದಿಯ ಗಮನ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. 

ಸರ್ಕಾರದಲ್ಲಿ ಇದ್ದುಕೊಂಡು ದೇಶವನ್ನು ಕೊಳ್ಳೆ ಹೊಡೆಯುವವರಿಗೆ ನೀವು ಅಧಿಕಾರ ಕೊಡ್ತಿರಾ? ಈ ಕಾಂಗ್ರೆಸ್‍ನ  ಇತಿಹಾಸ ದೇಶವನ್ನು ಲೂಟಿ ಹೊಡೆಯುವುದೇ ಆಗಿದೆ. ಇಂತಹ ಲೂಟಿಕೋರರ ಕೈಯಲ್ಲಿ ದೇಶವನ್ನ ಕೊಡುತ್ತೀರಾ? ಕಾಂಗ್ರೆಸ್ ಕರ್ನಾಟಕವನ್ನು ಲೂಟಿಯ ಎಟಿಎಂ ಆಗಿ ಮಾಡಿಕೊಂಡಿದ್ದಾರೆ.

ಅಧಿಕಾರ ಪಡೆದು ಇಷ್ಟು ಕಡಿಮೆ ಸಮಯದಲ್ಲೇ ಖಜಾನೆ ಲೂಟಿ ಹೊಡದಿದ್ದಾರೆ. ಇಲ್ಲಿನ ಸರ್ಕಾರಿ ನೌಕರರಿಗೆ ಸಂಬಳ ಕೂಡಲಾಗುತ್ತಿಲ್ಲ. ಜನರ ಹಿತಕ್ಕಾಗಿ ಒಂದು ಯೋಜನೆ ಇಲ್ಲ. ಕಾಂಗ್ರೆಸ್ ಬಂದ್ರೆ ದೇಶ ಹಾಳಾಗುತ್ತದೆ ಎಂದು ಇತಿಹಾಸ ಹೇಳುತ್ತದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಕರ್ನಾಟಕದಲ್ಲಿ ನಮ್ಮ ಸರ್ಕಾರ, ರೇಲ್ವೆ ನಿಲ್ದಾಣ ಮಾಡುತ್ತಿದೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ಮಾಡಲಾಗುತ್ತಿದೆ. ಹಿಂದಿನ 10 ವರ್ಷದಲ್ಲಿ ಮೋದಿ ಸರ್ಕಾರ ಬಡ ಜನರ ಪರ ಯೋಚಿಸಿದೆ. ಕಾಂಗ್ರೆಸ್‍ನವರು ಒಂದು ಕ್ಷಣದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇವೆ ಅಂತಾರೆ, 70 ವರ್ಷದಿಂದ ಆಗದದ್ದನ್ನು ಈಗೇನು ಮಾಡ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ.   

ನಾನು ಪ್ರಧಾನಿ ಆಗುವ ಮೊದಲು 18 ಸಾವಿರ ಗ್ರಾಮಗಳ ಜನರು ಕಗ್ಗತ್ತಲಲ್ಲಿ ಜೀವಿಸುತ್ತಿದ್ದರು. ನನಗೆ ಅವಕಾಶ ಕೊಟ್ಟ ನಂತರ ಎಲ್ಲೆಡೆ ವಿದ್ಯುತ್ ಕೊಟ್ಟೆವು, ದೇಶದಲ್ಲಿ ಒಂದೇ ಒಂದು ವಿದ್ಯುತ್ ಇಲ್ಲದ ಗ್ರಾಮವಿಲ್ಲ. 75%ನಷ್ಟು ಜನರಿಗೆ ನೀರು ಕೊಡಲಾಗಿದೆ. ಈ ಮೊದಲು ಕಾಂಗ್ರೆಸ್ ಮಾಡಬಹುದಿತ್ತಲ್ಲಾ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. 

ಈ ವೇಳೆ ಬಾಲಕಿ ಮೇಟಿ ರಚಿಸಿದ ಮೋದಿ ಹಾಗೂ ಅವರ ತಾಯಿಯ ಭಾವಚಿತ್ರವನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ, ಮಗಳೇ ನಿನಗೆ ಪತ್ರ ಬರೆಯುತ್ತೇನೆ ಎಂದರು.

Related Post

Leave a Reply

Your email address will not be published. Required fields are marked *