Breaking
Mon. Dec 23rd, 2024

ಜಗದೀಶ್ ಶೆಟ್ಟರ್ ಗೆ ಮತ ಹಾಕಲು ಜಿಲ್ಲೆಯ ಸ್ವಾಭಿಮಾನಿ ಜನರ ಮನಸ್ಸು ಒಪ್ಪುವುದಿಲ್ಲ….!

ಬೆಳಗಾವಿ : ಮೃಣಾಲ ಹೆಬ್ಬಾಳಕರ್ ಅತ್ಯಂತ ಕ್ರಿಯಾಶೀಲ ಯುವಕನಾಗಿದ್ದಾಗ, ಲೋಕಸಭೆಗೆ ಹೋದಾಗ ಜಿಲ್ಲೆಗೆ ಅನ್ಯಾಯವಾಗುವುದನ್ನು ತಡೆಯುವ ಸಾಮರ್ಥ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿಯ ಅನಗೋಳದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು ಮಾತನಾಡಿದ ಅವರು, ವಿದ್ಯಾವಂತ, ಎಲ್ಲ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ನಮ್ಮನ್ನು ಪ್ರತಿನಿದಿಸುವ ಸಮರ್ಥ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್.

ಅವರನ್ನು ಆಯ್ಕೆ ಮಾಡಿದರೆ ಕೇವಲ ಒಮ್ಮೆ ಜನಿಸಿದ ನಮ್ಮ ಮತ ಸಾರ್ಥಕ ಎಂಬ ಭಾವನೆ ಬರುವಂತೆ ಕೆಲಸ ಮಾಡುತ್ತಾನೆ ಎಂದು ಅವರು ಹೇಳಿದರು. ಬೆಳಗಾವಿ ಕ್ಷೇತ್ರದ ಎಲ್ಲ 8 ವಿಧಾನ ಸಭಾ ಕ್ಷೇತ್ರಗಳಿಂದಲೂ ಕಾಂಗ್ರೆಸ್ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.

ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತ್ಯಧಿಕ ಮುನ್ನಡೆ ಸಾಧಿಸಲಿದೆ. ಬಿಜೆಪಿ ಅಭ್ಯರ್ಥಿ ಕುರಿತು ಅವರ ಪಕ್ಷದಲ್ಲೇ ದೊಡ್ಡ ಮಟ್ಟದ ಅಸಮಾಧಾನವಿದೆ. ಕೆಲವು ಮೊದಲ ಕಾಟಾಚಾರಕ್ಕೆನ್ನುವಂತೆ ಪ್ರಚಾರಕ್ಕೆ ಹೋಗುತ್ತಿದೆ. ಜಗದೀಶ್ ಶೆಟ್ಟರ್ ಗೆ ಮತ ಹಾಕಲು ಜಿಲ್ಲೆಯ ಸ್ವಾಭಿಮಾನಿ ಜನರ ಮನಸ್ಸು ಒಪ್ಪುವುದಿಲ್ಲ.

ಅವರು ಜಿಲ್ಲೆಗೆ ಮಾಡಿರುವ ಅನ್ಯಾಯವನ್ನು ನೋಡಿಯೂ ಮತ ಹಾಕಿದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತಾಗುತ್ತದೆ ಎಂದು ಚನ್ನರಾಜ ಎಚ್ಚರಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಕಾಂಗ್ರೆಸ್ ಮತ್ತು ಕಾರ್ಯಕರ್ತರು.

Related Post

Leave a Reply

Your email address will not be published. Required fields are marked *