Breaking
Mon. Dec 23rd, 2024

ನೇಕಾರರ ಕಷ್ಟಗಳಿಗೆ ಸದಾ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ಮುಂದಿದೆ….!

ಬೆಳಗಾವಿ : ನೇಕಾರರ ಕಷ್ಟಗಳಿಗೆ ಸದಾ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ರಾಮದುರ್ಗ ತಾಲೂಕಿನ ನೇಕಾರ ಸಮುದಾಯದ ಕೃಷ್ಣ ಅತ್ಯಂತ ಹತ್ತಿರದ ಕಂಡಿದ್ದು, ನಾನು ಶಾಸಕನಾಗಿದ್ದಾಗ ನೇಕಾರ ಸಮುದಾಯದಲ್ಲಿ ವಾಸಿಸುವ ಕಾಲೋನಿಗಳ ಅಭಿವೃದ್ಧಿ ಪಡಿಸಲಾಗಿದೆ. ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಸ್ಥಾಪಿಸಿದರು.

ಲೋಕಸಭಾ ಚುನಾವಣೆಯ ಅಂಗವಾಗಿ ರಾಮದುರ್ಗ ಪಟ್ಟಣದ ನೇಕಾರ ವೇದಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಮತಯಾಚನೆ ಮಾಡಿ ಮಾತನಾಡಿದರು, ಈ ಹಿಂದೆ ಕಂಡು ಕೇಳರಿಯದ ಪ್ರವಾಹ ಉಂಟಾಗಿ ಸಾಕಷ್ಟು ಮಗ್ಗುಲುಗಳು ಹಾಗೂ ಮನೆ ಕಳೆದುಕೊಂಡಿದ್ದರು. 

ಇಂದು ನೇಕಾರರ ಬದುಕು ಅತ್ಯಂತ ಕಷ್ಟಕರವಾಗಿದ್ದು, ಅವರಿಗೆ ಮೂಲ ಸೌಕರ್ಯ ಕಲ್ಪಿಸಲು ಜಗದೀಶ್ ಶೆಟ್ಟರ್ ಅವರು ಪ್ರಯತ್ನಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ಎಷ್ಟು ಸತ್ಯವೋ. ಅಷ್ಟೇ ಜಗದೀಶ್ ಶೆಟ್ಟರ್ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗಂಗಾವತಿ ಶಾಸಕರಾದಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಮಾಜಿ ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಎಂ.ಡಿ. ಲಕ್ಷ್ಮೀ ನಾರಾಯಣ, ರಾಜ್ಯ ನೇಕಾರ ಪ್ರಕೋಷ್ಠದ ಸಂಚಾಲಕರಾದ ಬಿ.ಎಸ್. ಸೋಮಶೇಖರ್, ಪ್ರಮುಖರಾದ ಗಜಾನನ ಗೋಜಿ,ಹರೀಶ್ ಕುಮಾರ್, ರಾಜು ಬಿಳಗಿ, ಶಂಕ್ರಣ್ಣ ಮುರಡಿ, ಈರಣ್ಣ ಅಂಗಡಿ, ಶ್ರೀ ಮಲ್ಲಣ್ಣ ಯಾದವಾಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಗುರುಹಿರಿಯರು, ಮಾತೆಯರು, ಯುವಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *