Breaking
Mon. Dec 23rd, 2024

ಮೇ 01 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಇರುವುದಿಲ್ಲ…!

ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ ಹಾಲಿ ಇರುವ 66 ಕೆವಿ ಡಿ.ಸಿ ಲೈನ್‍ನಿಂದ ಮಲ್ಟಿ ಸಕ್ರ್ಯೂಟ್ ಟವರ್ ನಿರ್ಮಾಣ ಮಾಡಲು 66/11 ಕೆವಿ ಪಂಡರಹಳ್ಳಿ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆವಿ ಮಾರ್ಗ ಮುಕ್ತತೆಯನ್ನು ನೀಡಬೇಕಾಗಿರುವುದರಿಂದ ಮೇ 01 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

ವಿದ್ಯುತ್ ಅಡಚಣೆಯಾಗುವ ಮಾರ್ಗಗಳು: ಅನ್ನೇಹಾಳು, ಹುಲ್ಲೂರು, ಪಂಡರಹಳ್ಳಿ, ಜಾನುಕೊಂಡ, ಸಿದ್ದಾಪುರ, ಗೊಡಬನಾಳ್, ಸೊಂಡೆಕೊಳ, ಸಿಂಗಾಪುರ, ಕಕ್ಕೇಹರವು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *