ಸಾಗರ : ಮಡಿವಾಳ ಕಾಂಗ್ರೆಸ್ ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾಜಕ್ಕೆ ಸಾಕಷ್ಟು ಅನುದಾನ ನೀಡಿ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಆ ಕಾರಣ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಡಿವಾಳ ಸಮುದಾಯ ಶೇ 75% ರಷ್ಟು ಭಾಗವಾಗಿದೆ ಎಂದು ಮಡಿವಾಳ ಸಮುದಾಯ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಅವರು ಇಂದು ಸಾಗರ ಪಟ್ಟಣದ ಜಂಬಗಾರುವಿನ ಮಡಿವಾಳ ಸಮುದಾಯದ ನಿರ್ದೇಶಕ ಮತ್ತು ಶಾಸಕ ಬೇಳೂರು ಗೋಪಾಲಕೃಷ್ಣ ರ ಕಟ್ಟಾ ಅಭಿಮಾನಿ ಸಂದೇಶ ರಾಣ ರವರ ನಿವಾಸದಲ್ಲಿ ಮಲೆನಾಡ ರಹಸ್ಯ ಪತ್ರಿಕೆಯೊಂದಿಗೆ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಸಮಾಜದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವಂತೆ ಎಸ್.ಸಿ. ಜನಾಂಗಕ್ಕೆ ಸಿಗುವ ಮಾನ್ಯತೆಯನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಭರವಸೆಯನ್ನು ನೀಡಿದ್ದಾರೆ.
ಮಡಿವಾಳ ವೃತ್ತಿ ನಿರ್ವಹಿಸುತ್ತಿರುವವರ ಸಮಾಜ ಬಾಂಧವರಿಗೆ ಇಸ್ತ್ರಿ ಅಂಗಡಿಯ ವಿದ್ಯುತ್ ಶುಲ್ಕದಲ್ಲಿ ಶೇ.50% ರಿಯಾಯಿತಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರದ 2013 ರಿಂದ 2018 ರ ಅವಧಿಯಲ್ಲಿ ಸಮಾಜಕ್ಕೆ ವಿವಿಧ ಯೋಜನೆಗಳ ಮುಖಾಂತರ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಈ ಎಲ್ಲಾ ಕಾರಣಕ್ಕಾಗಿ ಮಡಿವಾಳ ಸಮಾಜ ಬಾಂಧವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ರವರನ್ನು ಬೆಂಬಲಿಸಿ, ಗೆಲ್ಲಿಸಿ. ಸಿದ್ದರಾಮಯ್ಯ ರವರ ಕೈ ಬಲಪಡಿಸಬೇಕಾಗಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷರಾದ ಸಿ. ನಂಜಪ್ಪನವರು ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಿತಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಸಾಗರ ಮಡಿವಾಳ ಸಮುದಾಯದ ನಿರ್ದೇಶಕರುಗಳಾದ ಸಂದೇಶ್ ರಾಣ. ಉಮೇಶ್ಬಾಳೆಗುಂಡಿ, ಶಿವಮೂರ್ತಿ.ವೆಂಕಟೇಶ್.ಡಾ.ರಂಗನಾಥ್.ವೆಂಕಟೇಶ್.ಹಿರಣ್ಣಯ್ಯ.ಹಾಗು ಇತರ ಮಾದರಿಗಳು.