ಯಾವುದೇ ಪದವಿಯೊಂದಿಗೆ ಬಿ.ಇಡಿ ಶಿಕ್ಷಣ ಪಡೆದು ತಾನು ಶಾಲಾ ಶಿಕ್ಷಕ, ಶಿಕ್ಷಕಿ ಆಗಬೇಕು ಎಂದು ಕಂಡಿರುವ ರಾಜ್ಯದ ಯುವಜನತೆ, ಈ ಶಿಕ್ಷಣ ಅರ್ಹತೆಗಳ ಜೊತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಈ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸುತ್ತದೆ. ಇದರ ಪ್ರಕಾರ 2024ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಇದೀಗ ಅಧಿಸೂಚಿಸಿ, ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರೀಕ್ಷೆಯ ಆಯ್ಕೆಯ ಜೊತೆಗೆ, ಅರ್ಜಿ ದಿನಾಂಕಗಳು, ಅರ್ಜಿ ವಿಧಾನ, ಇತರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ. ಅಂದಹಾಗೆ ಇಂದಿನ ಲೇಖನದಲ್ಲಿ ಈ ಶಿಕ್ಷಕರ ಅರ್ಹತಾ ಪರೀಕ್ಷೆ ಏಕೆ, ಯಾವ ನಿಯಮಗಳ ಪ್ರಕಾರ ಎಂದು ಸಹ ಕೆಳಗೆ ತಿಳಿಸಲಾಗಿದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕಲು ಅರ್ಹತೆಗಳು
- 1 ರಿಂದ 5 ನೇ ತರಗತಿ (ಪ್ರಾಥಮಿಕ ಹಂತ) ಶಿಕ್ಷಕರಿಗೆ ಅರ್ಹತೆ
- ಪಿಯುಸಿ/ ಸೀನಿಯರ್ ಸೆಕೆಂಡರಿ / ತತ್ಸಮಾನ ಪರೀಕ್ಷೆಯಲ್ಲಿ ಶೇಕಡ.50 ಅಂಕ ಪಡೆದಿರಬೇಕು. ಜೊತೆಗೆ ಈ ಕೆಳಗಿನ ಶಿಕ್ಷಣ ಪಡೆದಿರಬೇಕು.
- 2 ವರ್ಷಗಳ D.El.E ಕೋರ್ಸ್ ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು. ಅಥವಾ
- 4 ವರ್ಷದ B.El.Ed ತೇರ್ಗೆಡೆ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
- 2 ವರ್ಷಗಳ ಡಿಪ್ಲೊಮಾ ಇನ್ ಎಜುಕೇಶನ್ ತೇರ್ಗಡೆ ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು
- ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರಬೇಕು ಹಾಗೂ 2 ವರ್ಷಗಳ DLEd ಕೊರ್ಸಿನ ದ್ವಿತೀಯ ಪದವಿ ಪಡೆದವರು ಅಥವಾ ದ್ವಿತೀಯ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಬಹುದು.
- 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಯ ಆಕಾಂಕ್ಷಿಗಳಿಗೆ ಟಿಇಟಿ’ಗೆ ಅರ್ಜಿ ಸಲ್ಲಿಸಲು ಅರ್ಹರು
- ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಬೇಕು. ಜೊತೆಗೆ ಈ ಕೆಳಗಿನ ವಿದ್ಯಾರ್ಹತೆಗಳನ್ನು ಪಡೆದಿರಬೇಕು
- 2 ವರ್ಷಗಳ D.El.Ed ಕೊರ್ಸಿನ (ಯಾವ ಹೆಸರಿನಿಂದ ಕರೆಯುವರೋ ಆ ಹೆಸರಿನ) ದ್ವಿತೀಯ ಪದವಿ ತೇರ್ಗಡೆ ಹೊಂದಿರುವವರು ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅಥವಾ
- 2 ವರ್ಷದ B.Ed ಪದವಿಯಲ್ಲಿ ತೇರ್ಗಡೆ ಅಥವಾ ಅಂತಿಮ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅಥವಾ
- ಪಿಯುಸಿ/ ಸೀನಿಯರ್ ಸೆಕೆಂಡರಿ’ಯಲ್ಲಿ ಶೇ.50 ಅಂಕಗಳಿರಬೇಕು. ಹಾಗೂ 4 ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್‌ನಲ್ಲಿ (B.El.Ed) ತೇರ್ಗಡೆ ಹೊಂದಿರುವವರು ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ
- 4 ವರ್ಷಗಳ ಪದವಿಯಲ್ಲಿ ತೇರ್ಗಡೆ ಅಥವಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅಥವಾ
- ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿ, 2 ವರ್ಷದ ಬಿ.ಇಡಿ(ವಿಶೇಷ ಶಿಕ್ಷಣ) ಪದವಿಯಲ್ಲಿ ಪಾಸ್ ಆಗಿರುವವರು ಅಥವಾ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಟಿಐಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಪರೀಕ್ಷಾ ಶುಲ್ಕ ವಿವರ
- – ಸಾಮಾನ್ಯ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
- – ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
- – SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.350 (2 ಪತ್ರಿಕೆಗಳಿಗೆ ರೂ.500).
- – ವಿಶೇಷಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾದರಿ
- ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳು.
- ತಪ್ಪು ಉತ್ತರಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುತ್ತದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 2 ಪತ್ರಿಕೆಗಳನ್ನು ಒಳಗೊಂಡಿದೆ.
- ಪತ್ರಿಕೆ-1 : 1 ರಿಂದ 5 ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರ ಅರ್ಹತೆಗಾಗಿ.
- ಪತ್ರಿಕೆ-2 : 6 ರಿಂದ 8ನೇ ತರಗತಿ ಬೋಧಿಸಲ್ಪಡುವ ಶಿಕ್ಷಕರ ಅರ್ಹತೆಗಾಗಿ. .
- ಸೂಚನೆ : ಅಭ್ಯರ್ಥಿಯು ಈ ಮೇಲಿನ 2 ತರಗತಿಗಳಲ್ಲಿ ಬೋಧಿಸಲು ಅಪೇಕ್ಷಿಸಿದ ಮೇಲೆ 2 ಪರೀಕ್ಷೆಗಳಿಗೆ ಹಾಜರಾಗಲಿಲ್ಲ. ಒಂದೇ ದಿನ ಎರಡು ಸೆಷನ್‌ಗಳಲ್ಲಿ ಎರಡು ಪತ್ರಿಕೆಗಳ ಪರೀಕ್ಷೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಏಕೆ?
ಆರ್ಟಿಐ ಕಾಯ್ದೆಯ ಸೆಕ್ಷನ್ 23 ಉಪ ವಿಭಾಗ (1) ನಿಬಂಧನೆಗಳ ಅನುಸಾರ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) 1 ರಿಂದ 8 ನೇ ತರಗತಿಗಳ ಶಿಕ್ಷಕರ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಆರ್ಟಿಐ ಕಾಯ್ದೆ 2ನೇ ಅಂಕಿಅಂಶಗಳಲ್ಲಿ ಉಲ್ಲೇಖಿಸಲಾದ ಯಾವುದೇ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಲು ಎನ್‌ಸಿಟಿಇಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.
ಶಿಕ್ಷಕರ ನೇಮಕಾತಿಗೆ ಅರ್ಹರಾಗಲು ಟಿಇಟಿಯನ್ನು ಕನಿಷ್ಠ ಅರ್ಹತೆಯನ್ನಾಗಿ ಅಳವಡಿಸುವ ಉದ್ದೇಶಗಳು
1. ನೇಮಕಾತಿ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಮತ್ತು ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
2. ಶಿಕ್ಷಕ ಶಿಕ್ಷಕ ಸಂಸ್ಥೆಗಳು ಮತ್ತು ಪ್ರಶಿಕ್ಷಣಾರ್ಥಿಗಳು ತಮ್ಮ ಸಂಸ್ಥೆಯ ಸುಧಾರಣೆಯನ್ನು ಪ್ರೇರೇಪಿಸಲು.
3. ಸರ್ಕಾರವು ಶಿಕ್ಷಕರ ಶೈಕ್ಷಣಿಕ ಗುಣಮಟ್ಟಕ್ಕೆ ವಿಶೇಷ ಒತ್ತು ನೀಡಿದೆ ಎಂಬ ಸಕಾರಾತ್ಮಕ ಸಂದೇಶವನ್ನು ಎಲ್ಲಾ ಭಾಗಿದಾರರಿಗೆ ನೀಡಲಾಗಿದೆ.