ಚಿತ್ರದುರ್ಗ, ಮೇ. 01 : ಜಾತ್ರೆಯಲ್ಲಿ ದೇವಿಗೆ ಕೋಣ ಬಲಿ ಕೊಡುವ ವೇಳೆ ಕೋಣ ಗುದ್ದಿ ಕೊಲ್ಲಪ್ಪ (53 ವರ್ಷ) ಎಂಬಾತ ಸಾವನ್ನಪ್ಪಿದ ಘಟನೆ ತಾಲೂಕಿನ ಮದಕರಿ ಪುರ ಗ್ರಾಮದಲ್ಲಿ ಇಂದು (ಬುಧವಾರ) ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.
ಮದಕರಿಪುರದಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಅದರಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯುತ್ತಿತ್ತು. ಇಂದು ದೇವಿಗೆ ಕೋಣ ಬಲಿ ಕೊಡುವ ವೇಳೆ ದೇವಾಲಯ ಸಮಿತಿಯ ಸದಸ್ಯರೂ ಆಗಿದ್ದ ಕೊಲ್ಲಪ್ಪ ಅವರಿಗೆ ಆಕಸ್ಮಿಕವಾಗಿ ಕೋಣ ಗುದ್ದಿದ್ದು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ.