ಬೆಳಗಾವಿ : ನರೇಂದ್ರ ಮೋದಿಯವರ ಆಡಳಿತ, ಅವರ ದೂರದೃಷ್ಟಿ ಹಾಗೂ ಅವರ ಆರ್ಥಿಕ ನೀತಿಯಿಂದ ದೇಶ ಅಭಿವೃದ್ಧಿ ಆಗಿದೆ. ದೇಶವನ್ನು ಸೂಪರ್ ಪಾವರ್ ಮಾಡಲು ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಚಿತ್ರೆವಾಡ ನಲ್ಲಿ ಕೊನ್ವಾನ್ ಗಲ್ಲಿ, ರಾಮಲಿಂಗಟೆಂಡ್ ಗಲ್ಲಿ, ಶಿವಾಜಿ ರಸ್ತೆ, ಮುಜಾವರ ಗಲ್ಲಿ, ಅನ್ಸರ್ಕರ್ ಗಲ್ಲಿ, ತಿಲಕ್ ಚೌಕ್, ಬಸವನ ಗಲ್ಲಿ, ದೇಶಪಾಂಡೆ ಗಲ್ಲಿ ಹಾಗೂ ಮಾರುತಿಗಲ್ಲಿಯ ಪ್ರಮುಖರೊಂದಿಗೆ ಪ್ರಚಾರ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಬಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ, ಮಾತನಾಡಿದ ಜಗದೀಶ್ ಶೆಟ್ಟರ್ ಅವರು, ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ.
ಉತ್ತಮ ಸರ್ಕಾರದ ಹೇಗೆ ಇರಬೇಕು ಎಂಬುವುದಕ್ಕೆ ನರೇಂದ್ರ ಮೋದಿಯವರ ಸರ್ಕಾರ ಉತ್ತಮ ಉದಾಹರಣೆ ಆಗಿದೆ. ಆರ್ಥಿಕ ನೀತಿ ಗಟ್ಟಿಗೊಳಿಸುವ ಮೂಲಕ ದೇಶದ ಪ್ರಗತಿ ಯಾವ ರೀತಿ ಮಾಡಬೇಕು ಎಂದು ಮೋದಿಯವರು ತೋರಿಸಿಕೊಟ್ಟಿದ್ದಾರೆ. 2014 ರಲ್ಲಿ ಕಾಂಗ್ರೆಸ್ ಅಧಿಕಾರ ಬಿಟ್ಟು, ನರೇಂದ್ರ ಮೋದಿ ಅಧಿಕಾರ ವಹಿಸಿದಾಗ ದೇಶ ಆರ್ಥಿಕವಾಗಿ 14 ನೇ ಸ್ಥಾನದಲ್ಲಿ ಇತ್ತು, ಆದರೆ ಮೋದಿಯವರ 10 ವರ್ಷದ ಆಡಳಿತದಲ್ಲಿ 14 ನೇ ಸ್ಥಾನದಲ್ಲಿ ಇದ್ದ ಆರ್ಥಿಕತೆಯನ್ನು 5 ನೇ ಸ್ಥಾನಕ್ಕೆ ತಗೆದುಕೊಂಡು ಬಂದಿದ್ದಾರೆ. ಇನ್ನೂ ಎರಡೆ ವರ್ಷದಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬರಲಿದೆ. 10-15. ವರ್ಷದಲ್ಲಿ ಭಾರತ ನಂಬರ್ ಒನ್ ಆಗಿ ಸೂಪರ್ ಪಾವರ್ ಆಗುತ್ತದೆ ಎಂದು ತಿಳಿಸಿದರು.
ಪಾಕಿಸ್ತಾನದ ಪ್ರತಿಪಕ್ಷದ ನಾಯಕ ಮುಜಮಲ್ ರೆಹಮಾನ್ ಎನ್ನುವರು ಮೋದಿಯವರ ನಾಯಕತ್ವ ನೋಡಿ ದೇಶ ಮುನ್ನಡೆಸಬೇಕು ಎಂದು ತಮ್ಮ ದೇಶದ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ವಿಷಯವನ್ನು ಅನೇಕ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಹಾಗಾಗಿ ನಾವೆಲ್ಲರೂ ದೇಶದ ಭವಿಷ್ಯ, ದೇಶದ ಸುರಕ್ಷತೆ, ಹೀಗೆ ಅನೇಕ ಕಾರಣಗಳ ಸಲುವಾಗಿ ಮೋದಿವರನ್ನು ಮತ್ತೆ ಪ್ರಧಾನಿ ಮಾಡಬೇಕು. ಆ ನಿಟ್ಟಿನಲ್ಲಿ ನನಗೆ ಲೋಕಸಭೆಗೆ ಕಳುಹಿಸಿ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ, ಪ್ರಮುಖರಾದ ಮುರಘೆಂದ್ರಗೌಡ ಪಾಟೀಲ್, ನಗರ ಸೇವಕರಾದ ಸಂತೋಷ ಪೇಡನೆಕರ, ಜಯತೀರ್ಥ ಸವದತ್ತಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.