Breaking
Wed. Dec 25th, 2024

ಸ್ನ್ಯಾಕ್ಸ್‌ಗೆ ಪೈನಾಪಲ್‌ ಬಾರ್ಬೆಕ್ಯೂ,ಇಲ್ಲಿದೆ ಸರಳ ರೆಸಿಪಿ…!

 ಪ್ರತಿ ಸಂಜೆ ಹೊರಗೆ ತಯಾರಿಸಿ ಫಾಸ್ಟ್‌ ಫುಡ್ ಹಾಗೂ ಸ್ನ್ಯಾಕ್ಸ್‌ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಸಾಧ್ಯವಾದಷ್ಟು ಸಂಜೆಯ ತಿಂಡಿಗಳನ್ನು ಮನೆಯಲ್ಲೇ ತಯಾರಿಸಿ ತಿನ್ನಿ. ವಾರ ಪೂರ್ತಿ ಕೆಲಸದ ಒತ್ತಡದಲ್ಲಿ, ಒಳ್ಳೆ ಅಡುಗೆ ಮಾಡಲು ಸಮಯವಿಲ್ಲದಿದ್ದರೆ ವಾರಾಂತ್ಯದಲ್ಲಾದರೂ ನಿಮಗಾಗಿ ಸಮಯಕೊಟ್ಟು ಒಂದೊಳ್ಳೆ ಸ್ನ್ಯಾಕ್ಸ್‌ ತಯಾರಿಸಿ ಸವಿಯಿರಿ. ಈ ವಾರಾಂತ್ಯಕ್ಕೆ ಪೈನಾಪಲ್‌ ಬಾರ್ಬೆಕ್ಯೂ ತಯಾರಿಸಿ.   

ಪೈನಾಪಲ್‌ ಬಾರ್ಬೆಕ್ಯೂ ತಯಾರಿಸಲು ಅಂತ್ಯಂತ ಸುಲಭವಾದ ಸ್ನ್ಯಾಕ್ಸ್ ಆಗಿದ್ದು, ಸವಿಯಲು ಅತಿ ರುಚಿಕರವಾಗಿರುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯರು. ಹೀಗಾಗಿ ಈ ಸಂಜೆಯ ಸ್ನ್ಯಾಕ್ಸ್‌ಅನ್ನು ಒಮ್ಮೆಯಾದರು ಟ್ರೈ ಮಾಡಿ, ಪೈನಾಪಲ್‌ ಬಾರ್ಬೆಕ್ಯೂ ಮಾಡುವ ಸರಳ ವಿಧಾನ ಇಲ್ಲಿದೆ.

ಪೈನಾಪಲ್‌ ಬಾರ್ಬೆಕ್ಯೂ ಮಾಡಲು ಬೇಕಾಗುವ ಸಾಮಾಗ್ರಿಗಳು

ಪೈನಾಪಲ್‌- ಒಂದು ಹಣ್ಣು

ಕಾರದ ಪುಡಿ- 1 ಚಮಚ

ಮೆಣಸಿನ ಪುಡಿ- ಚಮಚ ಜಿರಿಗೆ

ಪುಡಿ- ರುಚಿಗೆ ತಕ್ಕಷ್ಟು

ಮೊಸರು- ಅರ್ಧ ಕಪ್‌ 

ಪೈನಾಪಲ್‌ ಬಾರ್ಬೆಕ್ಯೂ ಮಾಡುವ ವಿಧಾನ

ಮೊದಲು ಒಂದು ಪೈನಾಪಲ್‌ ಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಬಳಿಕ ಸಿಪ್ಪೆ ಸುಲಿದು ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಬೌಲ್‌ಗೆ ಕಾರದ ಪುಡಿ, ಮೆಣಸಿನ ಪುಡಿ, ಜಿರಿಗೆ ಪುಡಿ, ಮೊಸರು, ಉಪ್ಪು, ಲೆಮನ್ ಜ್ಯೂಸ್‌ ಹಾಕಿ ಮಿಕ್ಸ್‌ ಮಾಡಿ. ಅದಕ್ಕೆ ಕತ್ತರಿಸಿಟ್ಟ ಪೈನಾಪಲ್‌ ಹಣ್ಣನ್ನು ಹಾಕಿ ಹತ್ತು ನಿಮಿಷಗಳ ಕಾಲ ಇಡಿ. 

ಬಳಿಕ ಅದನ್ನು ಬಾರ್ಬೆಕ್ಯೂ ಮಾಡುವ ಕಡ್ಡಿಯಲ್ಲಿ ಜೋಡಿಸಿಕೊಂಡು ಲೋ ಫ್ಲೇಮಿನಲ್ಲಿ ತವದಲ್ಲಿ ಬೇಯಿಸಿ, ಒಂದೆರಡು ನಿಮಿಷ ಬೆಂದ ಬಳಿಕ, ಗ್ರಿಲ್‌ ಸಹಾಯದಿಂದ ನೇರವಾದ ಬೆಂಕಿಯಲ್ಲಿ ಕಾಯಿಸಿ ಹೀಗೆ ಮಾಡಿದರೆ ಜ್ಯೂಸಿಯಾದ ಪೈನಾಪಲ್‌ ಬಾರ್ಬೆಕ್ಯೂ ತಿನ್ನಲು ಸಿದ್ಧವಾಗುತ್ತದೆ. ಟೀ, ಕಾಫಿ ಅಥವಾ ಬೇರೆ ಪಾನಿಯಗಳ ಜೊತೆ ಇದನ್ನು ಸವಿಯಬಹುದು. ನೆನಪಿರಲಿ ಪೈನಾಪಲ್‌ ಬಾರ್ಬೆಕ್ಯೂ ಜೊತೆಗೆ ಸೈಡಿನಲ್ಲಿ ಈರುಳ್ಳಿ ಇದ್ದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. 

Related Post

Leave a Reply

Your email address will not be published. Required fields are marked *