ಸಾಗರ ಮೇ 04 : ಈ ದೇಶದ ರಕ್ಷಣೆ ನಮ್ಮೆಲ್ಲರ ಹೊಣೆ, ದೇಶ ಮೊದಲು ಎನ್ನುವವರು ಬಿ ಜೆ ಪಿ ಪಕ್ಷ ಎಂದು ಬೆಂಗಳೂರಿನ ಜಯನಗರ ಶಾಸಕ ಸಿ ಕೆಮೂರ್ತಿ ಹೇಳಿದರು.
ಅವರು ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಬಿ ವೈ ರಾಘವೇಂದ್ರರವರ ಪರ ಸಾಗರ ಕ್ಷೇತ್ರದ ಕ್ಷೇತ್ರದ ಮುಂಗರವಳ್ಳಿ, ಕೇಡಲಸರ, ಭೀಮನಕೋಣೆ, ಹೆಗ್ಗೋಡು, ಹೊನ್ನೇಸರ, ಪುರಪ್ಪೆಮನೆ, ಕಾನುಮನೆ. ವರದಾಮೂಲ ಮತ್ತು ಸಾಗರಾದ್ಯಂತ ಭಿರುಸಿನ ಪ್ರಚಾರ ನಡೆಸಿ.
ಕಳೆದ 10 ವರ್ಷಗಳಲ್ಲಿ ಸನ್ಮಾನ್ಯ ನರೇಂದ್ರಮೋದಿಯವರ ಸರ್ಕಾರ ಭ್ರಷ್ಟಾಚಾರವಿಲ್ಲದೆ ಸ್ವಚ್ಛ ಧಕ್ಷ ಅಧಿಕಾರವನ್ನು ದೇಶಕ್ಕೆ ನೀಡಿದೆ. ಜಿ ಡಿ ಪಿ ಬೆಳವಣಿಗೆಯಲ್ಲಿ ಗಣನೀಯ ಪ್ರಮಾಣದ ಸಾಧನೆ ಮಾಡಿದೆ, ಜಲಜೀವನ್ ಮುಷನ್ ಯೋಜನೆಯಲ್ಲಿ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರನ್ನು ನೀಡಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಮಟ್ಟಹಾಕಿರುವುದು ಮೋದಿಸರ್ಕಾರ
ಮುದ್ರಾಯೋಜನೆಯ ಮೂಲಕ ಸಾಮಾನ್ಯ ಜನರಸ್ವಾವಲಂಬಿ ಬದುಕಿಗೆ ದಾರಿಮಾಡಿಕೊಟ್ಟಿದೆ.
ಜನಸಾಮಾನ್ಯರಿಗೆ ಜನೌಷದೀ ಕೇಂದ್ರದ ಮೂಲಕ ಕೈಗೆಟುಕುವ ಧರದಲ್ಲಿ ಔಷದಿಗಳನ್ನು ಒದಗಿಸುತ್ತಿರುವುದು ಬಡವರಬಗ್ಗೆ ಬಿ ಜೆ ಪಿಗಿರುವ ಕಾಳಜಿಯನ್ನು ತೋರಿಸುತ್ತದೆ.
ಸಂಸದ ರಾಘವೇಂದ್ರರವರು ತಮಗೆ ನೀಡಿದ ಸಂಸದರ ನಿಧಿಯನ್ನು ವ್ಯವಸ್ಥಿತವಾಗಿ ಕ್ರಿಯಾ ಯೋಜನೆಯನ್ನು ರೂಪಿಸಿ ಅದನ್ನು ಸಂಪೂರ್ಣವಾಗಿ ಬಳಸಿದ ಕೀರ್ತಿಗೆ ಬಾಜನರಾಗಿದ್ದರೆ, ಗ್ಯಾರೆಂಟಿ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನನ್ನನ್ನು ಒಳಗೊಂಡು ಯಾವಶಾಸಕರಿಗೂ ಕಳೆದ 10 ತಿಂಗಳಿನಲ್ಲಿ ಒಂದು ನಯಾಪೈಸೆ ಅನುದಾನ ನೀಡಿರುವುದು ಸರ್ಕಾರದ ಖಜಾನೆ ಬರುತ್ತಿದೆ ಎಂದು ತಿಳಿಸಲಾಗಿದೆ. ಸರ್ಕಾರಿ ನೌಕರರಿಗೆ ಕಳೆದ 3 ತಿಂಗಳಿನಿಂದ ವೇತನ ಪಾವತಿಯಾಗುತ್ತಿಲ್ಲ.
ಭೀಕರ ಭರಗಾಲ ರಾಜ್ಯಾದ್ಯಂತ ಇದ್ದರೂ ಈಬಗ್ಗೆ ಗಮನಹರಿಸದಿರುವುದು ಕರ್ನಾಟಕ ಕಾಂಗ್ರೇಸ್ ಸರ್ಕಾರಕ್ಕೆ ಜನರಬಗ್ಗೆ ಇರುವ ಕಾಳಜಿ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಸೋಮಶೇಖರ್ ಬಿ ಜೆ ಪಿ ಮುಖಂಡರಾದ ಬಿ ಹೆಚ್ ರಾಘವೇಂದ್ರ, ಕಾಂತ್ರಿ ಪ್ರಸಾದ್, ಹು ಭಾ ಅಶೋಕ್, ರಾಜೇಶ್ ಮಾವಿನಸರ, ರಮೇಶ್ ಪಂಡ್ರಿ, ರಾಜೇಶ್ ಕೇಡಲಸರ ಉಪಸ್ತಿತರಿದ್ದರು.